Friday, July 30, 2021
Homeಜಿಲ್ಲೆಬೆಂಗಳೂರುನಟ ದರ್ಶನ‌ ವಿರುದ್ಧಅಸಮಾಧಾನ ವ್ಯಕ್ತ ಪಡಿಸಿದ ನಟಿ ರಕ್ಷಿತಾ

ಇದೀಗ ಬಂದ ಸುದ್ದಿ

ನಟ ದರ್ಶನ‌ ವಿರುದ್ಧಅಸಮಾಧಾನ ವ್ಯಕ್ತ ಪಡಿಸಿದ ನಟಿ ರಕ್ಷಿತಾ

ಬೆಂಗಳೂರು : ತಮ್ಮ ಪತಿ ಪ್ರೇಮ್‌ ಬಗ್ಗೆ ದರ್ಶನ್ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿರುವ ನಟಿ ರಕ್ಷಿತಾ, ”ಯಾರಾದರೂ ಇನ್ನೊಬ್ಬ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಮಾತನಾಡುವ ಮುನ್ನ ಅವರು ತಮ್ಮ ಜೀವನದಲ್ಲಿ ಏನಾಗಿದ್ದಾರೆ ಎಂದು ನೋಡಿಕೊಳ್ಳಬೇಕು ಎಂದಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ರಕ್ಷಿತಾ ಪ್ರೇಮ್, ಜನಗಳ ಮುಂದೆ ಏನು ಮಾತನಾಡಬೇಕು, ಹೇಗೆ ಮಾತನಾಡಬೇಕು ಎಂದು ಅರಿತುಕೊಳ್ಳಬೇಕು” ಎಂದಿದ್ದಾರೆ.

”ಮುಖ ಇಲ್ಲದ ಫೇಸ್‌ಬುಕ್ ಪ್ರೊಫೈಲ್‌ಗಳು ನನ್ನನ್ನು ಟಾರ್ಗೆಟ್ ಮಾಡುತ್ತಿವೆ ಏಕೆ? ನಾನು, ನನ್ನ ಪತಿ ಪ್ರೇಮ್ ಪರ ಬೆಂಬಲಕ್ಕೆ ನಿಂತಿದ್ದೇನೆ. ಅದಕ್ಕೆ ಅವರೆಲ್ಲ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ನನ್ನ ಪತಿಯ ಪರವಾಗಿ ನಿಂತರೆ ಉಳಿದವರನ್ನು ನಾನು ವಿರೋಧಿಸುತ್ತೇನೆ ಎಂದು ಹೇಗೆ ಪರಿಗಣಿಸಿದಿರಿ” ಎಂದು ರಕ್ಷಿತಾ ಪ್ರಶ್ನೆ ಮಾಡಿದ್ದಾರೆ.

”ಇನ್ನು ಮುಂದೆ, ನನ್ನ ಯೋಚನಾ ಕ್ರಮ ಯಾರಿಗಾದರೂ ಸರಿ ಎನಿಸಲಿಲ್ಲವೆಂದರೆ ಅದು ನಿಮ್ಮ ವ್ಯಕ್ತಿತ್ವದ ಸಮಸ್ಯೆಯೇ ಹೊರತು ನನ್ನ ಸಮಸ್ಯೆ ಅಲ್ಲ. ನಾನು ಪ್ರೇಮ್ ಬೆಂಬಲಕ್ಕೆ ನಿಲ್ಲುತ್ತೇನೆ. ಅದು ಅವರೊಬ್ಬರಿಗೆ ಅರ್ಥವಾದರೆ ಸಾಕು ಇನ್ಯಾರಿಗೂ ಅರ್ಥವಾಗುವ ಅವಶ್ಯಕತೆ ಇಲ್ಲ” ಎಂದಿದ್ದಾರೆ ಪ್ರೇಮ್.

”ಈಗ ನಮ್ಮ ಮದುವೆ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಲು ಹೊರಟಿರುವ ಎಲ್ಲರಿಗೂ ನಾಚಿಕೆಯಾಗಬೇಕು” ಎಂದಿದ್ದಾರೆ ರಕ್ಷಿತಾ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img