Friday, July 30, 2021
Homeಸುದ್ದಿ ಜಾಲಏರ್ ಪೋರ್ಟ್ ನಿಂದ ವಾಪಸ್ ತೆರಳಿದ ಯಡಿಯೂರಪ್ಪ.!

ಇದೀಗ ಬಂದ ಸುದ್ದಿ

ಏರ್ ಪೋರ್ಟ್ ನಿಂದ ವಾಪಸ್ ತೆರಳಿದ ಯಡಿಯೂರಪ್ಪ.!

ನವದೆಹಲಿ: ಹೈಕಮಾಂಡ್ ಆಹ್ವಾನದ ಮೇರೆಗೆ ದೆಹಲಿಗೆ ತೆರಳಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ವರಿಷ್ಠರ ಭೇಟಿ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಸಾಧ್ಯವಾಗದೆ ವಾಪಸ್ ಆಗಲು ನಿರ್ಧರಿಸಿದ್ದರು. ಆದರೆ ಇದೀಗ ಸ್ವತ: ಅಮಿತ್ ಶಾ ಸಿಎಂ ಗೆ ಬುಲಾವ್ ನೀಡಿದ್ದಾರೆ ಎನ್ನಲಾಗಿದೆ.

ಇಂದು ಬೆಳಿಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿಯಾಗಿದ್ದ ಸಿಎಂ ಯಡಿಯೂರಪ್ಪ, ಬಳಿಕ ಪುತ್ರ ಬಿ.ವೈ.ವಿಜಯೇಂದ್ರ ಜೊತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ರಾಜ್ಯ ರಾಜಕೀಯ ಬೆಳವಣಿಗಳ ಬಗ್ಗೆ ಚರ್ಚೆ ನಡೆಸಿದ್ದರು. ಬಳಿಕ ಅಮಿತ್ ಶಾ ಭೇಟಿಗೆ ನಿರ್ಧರಿಸಿದ್ದರು. ಆದರೆ ಸಾಧ್ಯವಾಗದೇ ಬೆಂಗಳೂರಿಗೆ ಹಿಂದಿರುಗಲು ಏರ್ ಪೋರ್ಟ್ ಗೆ ಬಂದಿದ್ದರು. ಅಷ್ಟರಲ್ಲಿ ಮತ್ತೆ ಅಮಿತ್ ಶಾ ಸಿಎಂ ಯಡಿಯೂರಪ್ಪನವರಿಗೆ ಬುಲಾವ್ ನೀಡಿದ್ದು, ಏರ್ ಪೊರ್ಟ್ ನಿಂದ ವಾಪಸ್ ಅಮಿತ್ ಶಾ ನಿವಾಸಕ್ಕೆ ಯಡಿಯೂರಪ್ಪ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img