Friday, July 23, 2021
Homeಬೆಂಗಳೂರುಅಗಲಿದ ಅಮ್ಮನ ಮೂರ್ತಿ ಪ್ರತಿಷ್ಠಾಪಿಸಿದ ನಟ ವಿಜಯ್

ಇದೀಗ ಬಂದ ಸುದ್ದಿ

ಅಗಲಿದ ಅಮ್ಮನ ಮೂರ್ತಿ ಪ್ರತಿಷ್ಠಾಪಿಸಿದ ನಟ ವಿಜಯ್

ಬೆಂಗಳೂರು : ನಟ ದುನಿಯಾ ವಿಜಯ್ ಅವರು ಅಗಲಿದ ತಮ್ಮ ತಾಯಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಈ ಮೂಲಕ ಅಮ್ಮನನ್ನು ಕಳೆದುಕೊಂಡ ನೋವನ್ನು ಮರೆಯಲು ಪ್ರಯತ್ನಿಸಿದ್ದಾರೆ.

ಕೋವಿಡ್ ಸೋಂಕಿನ ವಿರುದ್ಧ ಹೋರಾಡಿ ತಾಯಿಯನ್ನು ಬದುಕಿಸಿಕೊಂಡಿದ್ದ ದುನಿಯಾ ವಿಜಿ ಕೊನೆಗೂ ವಿಧಿಯಾಟದ ಮುಂದೆ ಸೋಲಬೇಕಾಯಿತು. ಕರೊನಾದಿಂದ ಗುಣಮುಖರಾಗಿದ್ದ ವಿಜಿ ಅವರ ತಾಯಿ ನಾರಾಯಣಮ್ಮ ಜುಲೈ 8ರಂದು ಕೊನೆಯುಸಿರೆಳೆದರು. ಇದೀಗ ತಮ್ಮನ್ನು ಅಗಲಿದ ಅಮ್ಮನಿಗಾಗಿ ಸಮಾಧಿ ಕಟ್ಟಿಸಿರುವ ವಿಜಿ, ಅಲ್ಲಿ ತಾಯಿಯ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.

ಇನ್ನು ವಿಜಯ್`ಗೆ ಸ್ಟಾರ್ ಪಟ್ಟ ಕೊಟ್ಟ ‘ದುನಿಯಾ’ ಚಿತ್ರದಲ್ಲಿ ಪ್ರೇಕ್ಷಕರನ್ನು ಕಾಡುವ ದೃಶ್ಯಗಳಲ್ಲಿ ಅದೂ ಒಂದು. ಚಿತ್ರದಲ್ಲಿ ತಾಯಿಗೆ ಸಮಾಧಿ ಕಟ್ಟಿಸುವ ಆಸೆ ಹೊತ್ತ ಹುಡುಗನ ಪಾತ್ರವದು. ಅದು ಸಿನಿಮಾದಲ್ಲಿ ಈಡೇರದೇ ಹೋದರೂ.. ನಿಜ ಜೀವನದಲ್ಲಿ ತಾಯಿಗೆ ಸಮಾಧಿ ಕಟ್ಟಿಸಿ, ಪ್ರತಿಮೆ ಸ್ಥಾಪಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img