Friday, July 23, 2021
Homeಜಿಲ್ಲೆಬೆಂಗಳೂರುರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವರುಣನ ಆರ್ಭಟ

ಇದೀಗ ಬಂದ ಸುದ್ದಿ

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವರುಣನ ಆರ್ಭಟ

ಬೆಂಗಳೂರು, ಜುಲೈ 17: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಜುಲೈ 21ರವರೆಗೂ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಸಮುದ್ರ ರಾಜನ ಅಬ್ಬರವೂ ಹೆಚ್ಚಾಗಿದ್ದು ಕಡಲ‌ ಅಲೆಗಳು ತೀರಕ್ಕೆ‌ ಅಪ್ಪಳಿಸುತ್ತಿದೆ. ಮುಂದಿನ ನಾಲ್ಕು ದಿನ ಕೂಡಾ ಭಾರೀ‌ ಮಳೆಯಾಗುವ ಸಾಧ್ಯತೆ ಇದ್ದು ಹವಾಮಾನ‌ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಗಾಳಿ-ಮಳೆಯಾಗಿದೆ. ಜಿಲ್ಲೆಯ ಜನ ಜೀವನ ಅಸ್ತವ್ಯಸ್ತವಾಗಿದೆ‌.

ಮುಲ್ಕಿ, ಪಣಂಬೂರು, ಮಾಣಿ, ಮಂಗಳೂರು, ಪುತ್ತೂರು, ಕೋಟಾ, ಕೊಲ್ಲೂರು, ಬೆಳ್ತಂಗಡಿ, ಉಪ್ಪಿನಂಗಡಿ, ಸುಳ್ಯ, ಕಾರ್ಕಳ, ಹೊಸನಗರ, ಧರ್ಮಸ್ಥಳ, ಭಾಗಮಂಡಲ, ಮಂಕಿ, ಸುಬ್ರಹ್ಮಣ್ಯ, ಕಾರವಾರ, ಗೋಕರ್ಣ, ಶಿರಾಲಿ, ಹೊನ್ನಾವರ, ಆಗುಂಬೆ, ಜಯಪುರ, ಮೂರ್ನಾಡಿನಲ್ಲಿ ಭಾರಿ ಮಳೆ ಸುರಿದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img