Friday, July 23, 2021
Homeಜಿಲ್ಲೆಬೆಂಗಳೂರುರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ಸಿಎಂ ಖಡಕ್​ ಮಾತು

ಇದೀಗ ಬಂದ ಸುದ್ದಿ

ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ಸಿಎಂ ಖಡಕ್​ ಮಾತು

ಬೆಂಗಳೂರು/ದೆಹಲಿ: ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲವೆಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಷ್ಟ್ರೀಯ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ರಾಜೀನಾಮೆ ಸುದ್ದಿ ಸತ್ಯಕ್ಕೆ ದೂರವಾಗಿದೆ. ‘ನೋ ಟ್ರೂಥ್ ಇನ್ ಇಟ್’ ಎಂದು ಖಡಕ್​ ಆಗಿ ಹೇಳಿದ್ದಾರೆ.

ತಾವು ರಾಜೀನಾಮೆ ಕೊಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ನಾಟ್ ಎಟ್ ಆಲ್, ನಾಟ್ ಎಟ್ ಆಲ್, ನಾಟ್ ಎಟ್ ಆಲ್ ಅಂತಾ ಹೇಳಿ ತೆರಳಿದರು. ರಾಜೀನಾಮೆ ನೀಡುವ ಸುದ್ದಿಗೆ ಯಾವುದೇ ಸತ್ಯಕ್ಕೆ ದೂರವಾಗಿದೆ. ಅದಕ್ಕೆ ಯಾವುದೇ ಮೌಲ್ಯವಿಲ್ಲ ಎಂದು ಹೇಳಿದ್ರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮನೆಗೆ ತೆರಳುವ ಮುನ್ನ ಸಿಎಂ ಕರ್ನಾಟಕ ಭವನದಲ್ಲಿ ಈ ಹೇಳಿಕೆ ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img