Sunday, August 1, 2021
Homeಬೆಂಗಳೂರುಕುಖ್ಯಾತ ನಕ್ಸಲ್ ಶಾನಿಚಾರ್ ಎನ್​ಕೌಂಟರ್​ಗೆ ಬಲಿ

ಇದೀಗ ಬಂದ ಸುದ್ದಿ

ಕುಖ್ಯಾತ ನಕ್ಸಲ್ ಶಾನಿಚಾರ್ ಎನ್​ಕೌಂಟರ್​ಗೆ ಬಲಿ

ಚೈಬಾಸ ( ಜಾರ್ಖಂಡ್ ) : ನಿಷೇಧಿತ ನಕ್ಸಲ್ ಸಂಘಟನೆ ಪೀಪಲ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (PLFI) ದ ಸದಸ್ಯ ಶಾನಿಚಾರ್ ಸುರಿನ್ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ.

ಜಾರ್ಖಂಡ್​ನ ಚೈಬಾಸ ಜಿಲ್ಲೆಯ ಗುಡ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಿಡುಂಗ್ ಬಾದಾ ಕೇಸ್ ಅರಣ್ಯದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಮುಖಾಮುಖಿಯಲ್ಲಿ ಸುರಿನ್ ಹತನಾಗಿದ್ದಾನೆ.

ಪಿಡುಂಗ್ ಬಾದಲ್ ಕೇಸ್ ಅರಣ್ಯದ ರಾನಿಯಾ ಪ್ರದೇಶದಲ್ಲಿ ಪಿಎಲ್​ಎಫ್​ಐ ನಕ್ಸಲರು ಕ್ಯಾಂಪ್ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಮಾಹಿತಿ ಆಧರಿಸಿದ ಪೊಲೀಸರು ಮತ್ತು ಸಿಆರ್​ಪಿಎಫ್​ನ 64 ನೇ ಬೆಟಾಲಿಯನ್ ಜಂಟಿ ಕಾರ್ಯಾಚರಣೆ ನಡೆಸಿದ್ದವು. ಕಾಡಿನಲ್ಲಿ ಶೋಧ ಕಾರ್ಯ ಕೈಗೊಂಡ ಭದ್ರತಾ ಪಡೆಗಳನ್ನು ಕಂಡು ನಕ್ಸಲರು ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img