Saturday, July 31, 2021
Homeಸುದ್ದಿ ಜಾಲಧಾರ್ಮಿಕ ಕೂಟಗಳನ್ನು ನಿರ್ಬಂಧಿಸಿದ ರಾಜಸ್ಥಾನ

ಇದೀಗ ಬಂದ ಸುದ್ದಿ

ಧಾರ್ಮಿಕ ಕೂಟಗಳನ್ನು ನಿರ್ಬಂಧಿಸಿದ ರಾಜಸ್ಥಾನ

ಜೈಪುರ: ಕೋವಿಡ್‌-19 ನಿಯಂತ್ರಿಸುವ ಸಲುವಾಗಿ ಕನ್ವರ್‌ ಯಾತ್ರೆ ಮತ್ತು ಈದ್‌-ಉಲ್-ಜುಹಾ ಸೇರಿದಂತೆ ಎಲ್ಲ ರೀತಿಯ ಧಾರ್ಮಿಕ ಆಚರಣೆಗಳು ಮತ್ತು ಉತ್ಸವಗಳನ್ನು ನಿರ್ಬಂಧಿಸಲಾಗುವುದು ಎಂದು ರಾಜಸ್ಥಾನ ಸರ್ಕಾರ ತಿಳಿಸಿದೆ.

ಅಧಿಸೂಚನೆ ಪ್ರಕಾರ, ಮಥುರಾದ ಗೋವರ್ಧನ ಪ್ರದೇಶದಲ್ಲಿ ಪ್ರತಿವರ್ಷ ಏರ್ಪಡಿಸುವ ಮುದಿಯಾ ಪೂನೊ ಮೇಳವೂ ಈ ವರ್ಷ ನಡೆಯುವುದಿಲ್ಲ. ಭಕ್ತರು ಗುಂಪುಗೂಡುವುದಕ್ಕೆ ಅನುಮತಿ ನೀಡಲಾಗುವುದಿಲ್ಲ. ಭಕ್ತರು ಮನೆಗಳಲ್ಲಿಯೇ ದೇವರಿಗೆ ಪ್ರಾರ್ಥನೆ ಸಲ್ಲಿಸುವಂತೆ ಮತ್ತು ಕೋವಿಡ್‌ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರ ಮನವಿ ಮಾಡಿದೆ.

ಉತ್ತರಾಖಂಡದಲ್ಲಿ ಕನ್ವರ್‌ ಯಾತ್ರೆಯನ್ನು ಸತತ ಎರಡನೇ ವರ್ಷವೂ ನಿಷೇಧಿಸಲಾಗಿದೆ. ಆದರೆ, ಉತ್ತರ ಪ್ರದೇಶದಲ್ಲಿ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img