Friday, July 30, 2021
Homeಜಿಲ್ಲೆಬೆಂಗಳೂರುಬಕ್ರೀದ್​ ಹಬ್ಬ ಆಚರಣೆಗೆ ಗೈಡ್​ಲೈನ್ಸ್​​ ಪ್ರಕಟ

ಇದೀಗ ಬಂದ ಸುದ್ದಿ

ಬಕ್ರೀದ್​ ಹಬ್ಬ ಆಚರಣೆಗೆ ಗೈಡ್​ಲೈನ್ಸ್​​ ಪ್ರಕಟ

ಬೆಂಗಳೂರು : ಮಹಾಮಾರಿ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಕ್ರೀದ್ ಹಬ್ಬ ಆಚರಣೆಗೆ ರಾಜ್ಯ ಸರ್ಕಾರ ಮಹತ್ವದ ಮಾರ್ಗಸೂಚಿ ಹೊರಡಿಸಿದೆ. ರಾಜ್ಯ ಸರ್ಕಾರ ಹೊರಡಿಸಿರುವ ಗೈಡ್​ಲೈನ್ಸ್​ ಪ್ರಕಾರವೇ ಹಬ್ಬ ಆಚರಣೆ ಮಾಡಲು ಸೂಚನೆ ನೀಡಿದೆ.

ಮುಸ್ಲಿಂ ಬಾಂಧವರ 2ನೇ ಪ್ರಮುಖ ಹಬ್ಬವಾಗಿರುವ ಬಕ್ರೀದ್​ ಬರುವ ಜುಲೈ 21 ರಂದು ಆಚರಿಸಲಾಗುವುದೆಂದು ರಾಜ್ಯದ ಹಿಲಾಲ್ ಸಮಿತಿ ಘೋಷಿಸಿದೆ. ರಾಜ್ಯದಲ್ಲಿ ಕೋವಿಡ್-19 ಅನ್‌ಲಾಕ್ ಪ್ರಕ್ರಿಯೆ ಜಾರಿಯಲ್ಲಿದ್ದರೂ ಸೋಂಕು ಹರಡುವಿಕೆ ತಡೆಗಟ್ಟಲು ಹೆಚ್ಚಿನ ಜಾಗರೂಕತೆ ಅನುಸರಿಸುವ ಅನಿವಾರ್ಯತೆ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾವುದೇ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಜನರು ಒಟ್ಟು ಗೂಡುವುದನ್ನು ನಿಷೇಧಿಸಲಾಗಿದೆ.

ಪ್ರಮುಖವಾಗಿ ಬಕ್ರೀದ್ ನಿಮಿತ್ತ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಆದರೆ ಮಸೀದಿಗಳಲ್ಲಿ 50 ಜನರಿಗಷ್ಟೇ ಪ್ರಾರ್ಥನೆಗೆ ಅನುಮತಿ ನೀಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img