Friday, July 30, 2021
Homeಜಿಲ್ಲೆಬೆಂಗಳೂರುಪೆಟ್ರೋಲ್ ಬೆಲೆ ಮತ್ತೆ ಹೆಚ್ಚಳ

ಇದೀಗ ಬಂದ ಸುದ್ದಿ

ಪೆಟ್ರೋಲ್ ಬೆಲೆ ಮತ್ತೆ ಹೆಚ್ಚಳ

ಬೆಂಗಳೂರು (ಜುಲೈ 17): ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ನಿನ್ನೆ ತಟಸ್ಥವಾಗಿದ್ದ ಪೆಟ್ರೋಲ್ ಬೆಲೆ ಇವತ್ತು ಮತ್ತೆ ಏರಿಕೆಯಾಗಿದೆ. ಇಂದು ಪೆಟ್ರೋಲ್ ಬೆಲೆ ಸುಮಾರು 30 ಪೈಸೆಯಷ್ಟು ದುಬಾರಿಯಾಗಿದೆ. ಇದೊಂದು ಜುಲೈ ತಿಂಗಳಲ್ಲಿ ಪೆಟ್ರೋಲ್ ಬೆಲೆ ಹೆಚ್ಚಳವಾಗುತ್ತಿರುವುದು ಇದು ಹತ್ತನೇ ಬಾರಿ. ಆದರೆ, ಇವತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ ಎಂಬುದು ಸಮಾಧಾನದ ವಿಚಾರ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 105 ರೂ ದಾಟಿದೆ. ನಿನ್ನೆ ಇಲ್ಲಿ 104.94 ರೂ ಇದ್ದ ಪೆಟ್ರೋಲ್ ಇಂದು 105.25 ರೂಪಾಯಿಗೆ ಬಂದು ಮುಟ್ಟಿದೆ. ಇನ್ನು, ಡೀಸೆಲ್ ಬೆಲೆ ಇಲ್ಲಿ ಲೀಟರ್​ಗೆ 95.26 ರೂ ಇದೆ. ಬೆಂಗಳೂರಿನಲ್ಲಿ ಕಳೆದ 10 ದಿನಗಳಿಂದ ಪೆಟ್ರೋಲ್ ಬೆಲೆ 1.49 ರೂಪಾಯಿಯಷ್ಟು ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ಡೀಸೆಲ್ ಬೆಲೆಯಲ್ಲಿ 37 ಪೈಸೆಯಷ್ಟು ಹೆಚ್ಚಳವಾಗಿದೆ. ದೇಶದ 20 ರಾಜ್ಯಗಳಲ್ಲಿ ಇದೀಗ ಪೆಟ್ರೋಲ್ ಬೆಲೆ ನೂರು ರೂ ಗಡಿ ದಾಟಿದೆ. ಮಧ್ಯಪ್ರದೇಶ ರಾಜಧಾನಿ ಭೋಪಾಲ್​ನಲ್ಲಿ ಪೆಟ್ರೋಲ್ ಬೆಲೆ 110 ರೂ ಮುಟ್ಟಿದೆ.

ಇನ್ನು, ರಾಜಸ್ಥಾನದಲ್ಲಿ ಪಾಕಿಸ್ತಾನದ ಗಡಿ ಸಮೀಪವೇ ಇರುವ ಶ್ರೀ ಗಂಗಾನಗರ್ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ 113.21 ರೂ ಇದೆ. ಇದು ದೇಶದಲ್ಲೇ ಅತಿ ದುಬಾರಿ ಪೆಟ್ರೋಲ್ ಇರುವ ಜಿಲ್ಲೆ ಎನಿಸಿದೆ. ಈ ಜಿಲ್ಲೆಯಲ್ಲಿ ಡೀಸೆಲ್ ಬೆಲೆ ಕೂಡ ಕೆಲ ದಿನಗಳ ಹಿಂದೆಯೇ ಶತಕ ಭಾರಿಸಿದೆ. ಇಲ್ಲಿ ಡೀಸೆಲ್ ಬೆಲೆ ಲೀಟರ್​ಗೆ 103.15 ರೂ ಇದೆ. ರಾಜಸ್ಥಾನ, ಒಡಿಶಾ ಮತ್ತು ಮಧ್ಯ ಪ್ರದೇಶದ ಕೆಲ ಜಿಲ್ಲೆಗಳಲ್ಲಿ ಡೀಸೆಲ್ ಬೆಲೆ ಶತಕ ದಾಟಿ ಮುಂದೆ ಹೋಗಿದೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img