Friday, July 30, 2021
Homeಜಿಲ್ಲೆಬೆಂಗಳೂರುKRS ಕದನ ಸಂಬಂಧ ರಾಜ್ಯಪಾಲರಿಗೆ ಸಂಸದೆ ದೂರು

ಇದೀಗ ಬಂದ ಸುದ್ದಿ

KRS ಕದನ ಸಂಬಂಧ ರಾಜ್ಯಪಾಲರಿಗೆ ಸಂಸದೆ ದೂರು

ಬೆಂಗಳೂರು : ಮಂಡ್ಯ ಅಕ್ರಮ ಗಣಿಗಾರಿಕೆಯ ಚೆಂಡು ಈಗ, ರಾಜ್ಯಪಾಲರ ಅಂಗಳಕ್ಕೆ ತಲುಪಿದೆ. ಇಂದು ಸಂಸದೆ ಸುಮಲತಾ ಅಂಬರೀಶ್ ರಾಜ್ಯಪಾಲರನ್ನು ಭೇಟಿ ಮಾಡಿ, ಅಕ್ರಮ ಗಣಿಗಾರಿಕೆ ಕುರಿತಂತೆ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ. ಈ ಮೂಲಕ ಕೆ ಆರ್ ಎಸ್ ಕದನ ಈಗ ರಾಜ್ಯಪಾಲರ ಕಚೇರಿಯನ್ನು ತಟ್ಟಿದೆ.

ಇಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ರಾಜ್ಯದ ನೂತನ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರನ್ನು ಭೇಟಿ ಮಾಡಿ ತಮ್ಮ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಎಗ್ಗಿಲ್ಲದೆ ನಡೆಯುತ್ತಿರುವ ಅತಿರೇಕದ ಗಣಿಗಾರಿಕೆ ಚಟುವಟಿಕೆಯಿಂದ ಆಗುತ್ತಿರುವ ಪರಿಸರ ಮಾಲಿನ್ಯ ಮತ್ತು ಅಪಾಯಗಳು, ನೀರಿನ ಕೊರತೆ ಕುರಿತಂತೆ ಮನವರಿಕೆ ಮಾಡಿಕೊಟ್ಟರು.

ಇನ್ನೂ ಗಣಿಗಾರಿಕೆ ಚಟುವಟಿಕೆ ಪ್ರದೇಶವನ್ನು ಸುತ್ತುವರೆದಿರುವ ಹಳ್ಳಿಗಳು ಹಾಗೂ ಮನೆಗಳಿಗೆ ಹಾನಿ ಉಂಟಾಗುತ್ತಿರುವ ವಿಷಯವನ್ನು ಮತ್ತು ಗಣಿಗಾರಿಕೆಗೆ ಬಳಸುವ ಅಕ್ರಮ ಸ್ಫೋಟಕಗಳಿಂದ ಮಂಡ್ಯ ಜಿಲ್ಲೆಯ ಜೀವನಾಡಿಯಾದ ಕೃಷ್ಣರಾಜಸಾಗರ ಅಣೆಕಟ್ಟೆಯು ಸಹ ಅಪಾಯದಲ್ಲಿರುವ ಹಿನ್ನೆಲೆಯಲ್ಲಿ ಅತಿರೇಕದ ಅಕ್ರಮ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸುವ ಮುಖೇನ ಕೃಷ್ಣರಾಜಸಾಗರ ಅಣೆಕಟ್ಟೆ ಹಾಗೂ ಗಣಿ ಚಟುವಟಿಕೆ ಪ್ರದೇಶವನ್ನು ಸುತ್ತುವರೆದಿರುವ ಹಳ್ಳಿಗಳ ಸುರಕ್ಷತೆಗೆ ಸೂಕ್ತ ಕ್ರಮವಹಿಸುವಂತೆ ಪತ್ರದ ಮುಖೇನ ಮಾನ್ಯ ರಾಜ್ಯಪಾಲರನ್ನು ಕೋರಿದ್ದಾರೆ. ಈ ಮೂಲಕ ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕಾಗಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img