Sunday, August 1, 2021
Homeಸುದ್ದಿ ಜಾಲKRSಗೆ ಒಳ ಹರಿವು ಹೆಚ್ಚಳ

ಇದೀಗ ಬಂದ ಸುದ್ದಿ

KRSಗೆ ಒಳ ಹರಿವು ಹೆಚ್ಚಳ

ಮಂಡ್ಯ: ಕಾವೇರಿ ಕಣಿವೆ ಪ್ರದೇಶದಲ್ಲಿ ಸತತ ಮಳೆ ಬಿದ್ದ ಪರಿಣಾಮ ಕೃಷ್ಣರಾಜ ಸಾಗರ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿಗಳಿದ್ದು, ಪ್ರಸ್ತುತ 94.88 ಅಡಿ ನೀರು ಏರಿಕೆಯಾಗಿದೆ.

ಈಗ ಜಲಾಶಯದ ಒಳ ಹರಿವು 21,796 ಕ್ಯೂಸೆಕ್‌ ಇದ್ದು, ಹೊರಹರಿವು 2,324 ಕ್ಯೂಸೆಕ್‌ ಆಗಿದೆ. ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣ 18.841 ಟಿಎಂಸಿ. ಕೊಡಗು ಪ್ರದೇಶದಲ್ಲಿ ಉತ್ತಮ ಮಳೆ ಬೀಳಲಾರಂಭಿಸಿದ್ದು, ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.

ಕೊಡಗು-ಕೇರಳ ಭಾಗಗಳ ಪ್ರದೇಶದಲ್ಲಿ ಉತ್ತಮ ಮಳೆ ಬಿದ್ದರೆ, ಕೆಆರ್‌ಎಸ್‌ ಜಲಾಶಯದ ಮೇಲ್ಭಾಗದ ಹೇಮಾವತಿ ಹಾಗೂ ಲಕ್ಷ್ಮಣ ತೀರ್ಥ ನದಿಗಳ ಮೂಲಕ ಒಳ ಹರಿವು ಪ್ರಮಾಣ ಹೆಚ್ಚಾಗಿ ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುತ್ತದೆ. ಈ ಮೂಲಕ ಒಳ ಹರಿವಿನ ಪ್ರಮಾಣವೂ ಹೆಚ್ಚಾಗಿ, ಈ ಬಾರಿ ಜಲಾಶಯ ತುಂಬುವುದರಲ್ಲಿ ಸಂಶಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img