Friday, July 23, 2021
Homeಸಿನಿಮಾತಮ್ಮ ಪಾತ್ರಕ್ಕೆ ತಾವೇ ಕನ್ನಡದಲ್ಲಿ ಡಬ್ಬಿಂಗ್​: ನಟಿ ಜಾಕ್ವೆಲಿನ್ ಫರ್ನಾಂಡೀಸ್

ಇದೀಗ ಬಂದ ಸುದ್ದಿ

ತಮ್ಮ ಪಾತ್ರಕ್ಕೆ ತಾವೇ ಕನ್ನಡದಲ್ಲಿ ಡಬ್ಬಿಂಗ್​: ನಟಿ ಜಾಕ್ವೆಲಿನ್ ಫರ್ನಾಂಡೀಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’ದ ಶೂಟಿಂಗ್​ ಬಹುತೇಕ ಮುಗಿದಿದ್ದು, ಸ್ಪೆಷಲ್ ಹಾಡೊಂದಕ್ಕೆ ಕಿಚ್ಚನ ಜೊತೆ ಹೆಜ್ಜೆ ಹಾಕಲು ಬೆಂಗಳೂರಿಗೆ ಬಂದಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಇದೀಗ ತಮ್ಮ ಕೆಲಸ ಮುಗಿಸಿ ವಾಪಸ್​ ಮುಂಬೈಗೆ ತೆರಳಿದ್ದಾರೆ.

ಜಾಕ್ವೆಲಿನ್ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಈಗಾಗಲೇ ಚಿತ್ರತಂಡ ಮಾಹಿತಿ ನೀಡಿದೆ. ಕೇವಲ ಡ್ಯಾನ್ಸ್​ ಮಾಡುವುದಷ್ಟೇ ಅಲ್ಲದೆ, ಜಾಕ್ವೆಲಿನ್ ಅವರಿಗೆ ಕೆಲವು ಸಂಭಾಷಣೆಗಳೂ ಇದ್ದು, ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡುತ್ತಾರಂತೆ. ನನ್ನ ಪಾತ್ರಕ್ಕೆ ಬೇರೆ ಯಾರಿಂದಲೂ ಡಬ್ಬಿಂಗ್ ಮಾಡಿಸಬೇಡಿ, ನಾನೇ ಮಾಡುತ್ತೇನೆ ಎಂದು ಆಶ್ವಾಸನೆ ಸಹ ಕೊಟ್ಟಿದ್ದಾರಂತೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img