Friday, July 23, 2021
Homeಜಿಲ್ಲೆಬೆಂಗಳೂರುನನ್ನ ಬಳಿ ಇದ್ದ ಆಸ್ತಿ ಖರೀದಿಸಲು ದರ್ಶನ್ ಮುಂದಾಗಿದ್ದರು : ಉಮಾಪತಿ

ಇದೀಗ ಬಂದ ಸುದ್ದಿ

ನನ್ನ ಬಳಿ ಇದ್ದ ಆಸ್ತಿ ಖರೀದಿಸಲು ದರ್ಶನ್ ಮುಂದಾಗಿದ್ದರು : ಉಮಾಪತಿ

ನಟ ಪುನೀತ್ ರಾಜ್ ಕುಮಾರ್ ಹಾಗೂ ಅವರ ಅಣ್ಣ ನಟ ರಾಘವೇಂದ್ರ ರಾಜ್ ಕುಮಾರ್ ಹೆಸರಿನಲ್ಲಿದ್ದ ಆಸ್ತಿಯನ್ನು ಎರಡು ವರ್ಷದ ಹಿಂದೆ ನಿರ್ಮಾಪಕ ಉಮಾಪತಿ ಖರೀದಿಸಿದ್ದರು. ಬಿಗ್ರೇಡ್ ರೋಡ್​ನಲ್ಲಿರುವ ರೆಸಿಡೆನ್ಸಿ ಹೋಟೆಲ್​ ಬಳಿ ರಾಘವೇಂದ್ರ ರಾಜ್​ ಕುಮಾರ್ ಎರಡು ಕೋಟಿ ರೂಪಾಯಿ ಬೆಲೆ ಬಾಳುವ ಬಿಲ್ಡಿಂಗ್ ಹೊಂದಿದ್ದರು. ಈ ಬಿಲ್ಡಿಂಗ್ ಅನ್ನು ನಾನು ಖರೀದಿಸಿದ್ದೆ ಎಂದು ಸ್ವತಃ ಉಮಾಪತಿ ತಿಳಿಸಿದ್ದು, ಈ ವ್ಯವಹಾರದಲ್ಲಿ ಯಾರೊಂದಿಗೂ ಯಾವುದೇ ತೊಂದರೆ, ಮನಸ್ತಾಪಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ .

ಉಮಾಪತಿ ಬಳಿ ಇದ್ದ ಆಸ್ತಿ ಖರೀದಿಸಲು ದರ್ಶನ್ ಮುಂದಾಗಿದ್ದರು. ಆದರೆ, ಅದನ್ನು ದರ್ಶನ್​ಗೆ ನೀಡಲು ನಿರಾಕರಿಸಿದ್ದರು. ಅದು ದೊಡ್ಮನೆ(ರಾಜ್​ಕುಮಾರ್ ಕುಟುಂಬ) ಆಸ್ತಿಯಾಗಿದ್ದು, ದರ್ಶನ್​ಗೆ ಮಾರಿದ್ರೆ ಬೇರೆ ಆಯಾಮ ಪಡೆದುಕೊಳ್ಳುವ ಭೀತಿಯಿಂದ, ಆಸ್ತಿಯನ್ನ ಕೊಟ್ಟಿರಲಿಲ್ಲ ಅಂತ ಉಮಾಪತಿ ತಿಳಿಸಿದ್ದಾರೆ. ಇನ್ನು ನಟ ದರ್ಶನ್ ಕೋಪ ಮಾಡಿಕೊಂಡಿದ್ದರೂ ಅಂತಾನೂ ಅನ್ನಿಸಲಿಲ್ಲ ಎಂದು ತಿಳಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img