Sunday, August 1, 2021
Homeಜಿಲ್ಲೆಬೆಂಗಳೂರುಬಾವಿಯಲ್ಲಿ ಬಿದ್ದ ಬಾಲಕಿ: ರಕ್ಷಣೆಗೆ ಮುಂದಾಗಿ ಪ್ರಾಣ ಕಳೆದುಕೊಂಡ್ರು 11 ಮಂದಿ

ಇದೀಗ ಬಂದ ಸುದ್ದಿ

ಬಾವಿಯಲ್ಲಿ ಬಿದ್ದ ಬಾಲಕಿ: ರಕ್ಷಣೆಗೆ ಮುಂದಾಗಿ ಪ್ರಾಣ ಕಳೆದುಕೊಂಡ್ರು 11 ಮಂದಿ

ವಿದಿಶಾ(ಮಧ್ಯಪ್ರದೇಶ): ಬಾವಿಯಲ್ಲಿ ಬಿದ್ದ ಬಾಲಕಿ ರಕ್ಷಿಸಲು ಮುಂದಾದ ಸಂದರ್ಭದಲ್ಲಿ ಅದರ ಗೋಡೆ ಕುಸಿದು ಸುಮಾರು 40 ಜನರು ಅದರೊಳಗೆ ಬಿದ್ದಿರುವ ಘಟನೆ ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿತ್ತು. ಈ ಪೈಕಿ 11 ಜನರು ಮೃತಪಟ್ಟಿದ್ದು, ಉಳಿದವರನ್ನು ರಕ್ಷಿಸುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ವಿದಿಶಾದ ಗಂಜ್​ ಬಸೋದಾ ಎಂಬ ಪ್ರದೇಶದಲ್ಲಿ ಮೊನ್ನೆ ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದೆ. ಬಾವಿಯಲ್ಲಿ ಬಾಲಕಿ ಬಿದ್ದಿರುವ ವಿಷಯ ಗೊತ್ತಾಗುತ್ತಿದ್ದಂತೆ ಗ್ರಾಮದ ಜನರು ಅಲ್ಲಿಗೆ ತೆರಳಿದ್ದರು. ಈ ವೇಳೆ ಬಾವಿಯ ಗೋಡೆ ಏಕಾಏಕಿ ಕುಸಿದಿರುವ ಕಾರಣ ಅನೇಕರು ಬಾವಿಯೊಳಗೆ ಬಿದ್ದಿದ್ದರು. ಆರಂಭದಲ್ಲಿ ಟ್ರ್ಯಾಕ್ಟರ್ ಸಹಾಯದಿಂದ ಅವರನ್ನ ಹೊರ ತೆಗೆಯಲು ಮುಂದಾದಾಗ ಅದು ಕೂಡ ಬಾವಿಯೊಳಗೆ ಬಿದ್ದಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎನ್​ಡಿಆರ್​ಎಫ್​ ಮತ್ತು ಎಸ್​​ಡಿಆರ್​ಎಫ್​ ತಂಡಗಳು ಸುಮಾರು 30 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಬಾವಿಯೊಳಗೆ 20 ಅಡಿ ನೀರು ತುಂಬಿದ್ದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಕೆಲ ಹೊತ್ತು ಅಡ್ಡಿಯಾಗಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img