Thursday, July 29, 2021
Homeಸುದ್ದಿ ಜಾಲನಂಜುಂಡೇಶ್ವರನ ಆದಾಯದಲ್ಲಿ ಶೇ.50 ರಷ್ಟು ಇಳಿಕೆ

ಇದೀಗ ಬಂದ ಸುದ್ದಿ

ನಂಜುಂಡೇಶ್ವರನ ಆದಾಯದಲ್ಲಿ ಶೇ.50 ರಷ್ಟು ಇಳಿಕೆ

ಮೈಸೂರು, ಜುಲೈ 17: ಮಹಾಮಾರಿ ಕೊರೊನಾ ಸೋಂಕು ಕಾರಣದಿಂದಾಗಿ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿ ಮಾಡಲಾಗಿತ್ತು. ಇದೇ ವೇಳೆ ಯಾವುದೇ ದೇವಸ್ಥಾನಗಳಿಗೂ ಭಕ್ತರು ತೆರಳದಂತೆ ನಿರ್ಬಂಧ ವಿಧಿಸಲಾಗಿತ್ತು.

ಲಾಕ್‌ಡೌನ್ ಎಫೆಕ್ಟ್‌ನಿಂದಾಗಿ ನಂಜನಗೂಡು ನಂಜುಂಡೇಶ್ವರನ ಆದಾಯಕ್ಕೂ ಕತ್ತರಿ ಬಿದ್ದಿದೆ. ಕಳೆದ ಒಂದು ವಾರದಿಂದ ಕೊರೊನಾ ಅನ್‌ಲಾಕ್ ಆಗಿದ್ದು, ಈ ನಡುವೆ ನಂಜನಗೂಡು ದೇವಸ್ಥಾನದ ಹುಂಡಿ ಹಣ ಸಂಗ್ರಹದಲ್ಲಿ ಭಾರೀ ಇಳಿಕೆ ಕಂಡಿದೆ.

ಮೈಸೂರು ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ನಂಜನಗೂಡು ಯಾವಾಗಲೂ ಭಕ್ತರಿಂದ ಭರ್ತಿಯಾಗಿರುತ್ತದೆ. ಆದರೆ ಕೊರೊನಾ ಹೊಡೆತದ ಕಾರಣ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಇಳಿಕೆ ಕಂಡಿರುವ ಪರಿಣಾಮ ನಂಜುಂಡನ ಹುಂಡಿ ಸಂಗ್ರಹದ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಹುಂಡಿ ಸಂಗ್ರಹದಲ್ಲಿ ಶೇ.50 ರಷ್ಟು ಇಳಿಕೆ ಕಂಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img