Sunday, August 1, 2021
Homeಸುದ್ದಿ ಜಾಲಜನಸಂಖ್ಯೆ ನಿಯಂತ್ರಣ ವಿರುದ್ಧ ಜಮೀರ್ ಕಿಡಿಕಾರಿದ್ದಾರೆ..?

ಇದೀಗ ಬಂದ ಸುದ್ದಿ

ಜನಸಂಖ್ಯೆ ನಿಯಂತ್ರಣ ವಿರುದ್ಧ ಜಮೀರ್ ಕಿಡಿಕಾರಿದ್ದಾರೆ..?

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಒಬ್ಬರಿಗೆ ಕುಟುಂಬದಲ್ಲಿ ಎರಡು ಮಕ್ಕಳಿಗಿಂತ ಹೆಚ್ಚಿದ್ದರೆ ಅವರಿಗೆ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ ಎಂಬ ಕಾಯ್ದೆಯನ್ನು ಜಾರಿ ಮಾಡಲು ಹೊರಟಿರುವ ಬೆನ್ನಲ್ಲೇ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಜಿಜೆಪಿ ವಿರುದ್ದ ಕಿಡಿಕಾರಿದ್ದಾರೆ.

ಆದರೆ ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದೇಶದ ಇತಿಹಾಸವನ್ನು ಗಮನಿಸುವುದಾದರೆ ಈಗಾಗಲೇ ಭಾರತದಲ್ಲಿ ಹಲವು ಬಗೆಯ ಜನಸಂಖ್ಯಾ ನಿಯಂತ್ರಣಾ ಅಭಿಯಾನವನ್ನು ಸರ್ಕಾರವು ತನ್ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೂಲಕ ಹಮ್ಮಿಕೊಂಡಿದೆ.

ಕಾಯ್ದೆಯನ್ನು ಜಾರಿ ಮಾಡಲು ಉತ್ತರ ಪ್ರದೇಶದಲ್ಲಿ ಮುಂದಾಗಿದ್ದಾರೆ ಆದರೆ ಇನ್ನು ಕಾಯ್ದೆಯನ್ನು ಜಾರಿ ಮಾಡಿಲ್ಲ , ೨೦ ವರ್ಷದ ಹಿಂದೆ ಯಾರಿಗಾದರೂ ನಿಮಗೆ ಎಷ್ಟು ಜನ ಅಣ್ಣತಮ್ಮಂದಿರು ಇದ್ದಾರೆ ಅಂದರೆ ೮-೧೦ ಅಂತ ಹೇಳುತ್ತಾರೆ. ಮುಸ್ಲಿಮರಿಗೆ ಮಾತ್ರ ಮಕ್ಕಳು ಇರುತ್ತಿರಲಿಲ್ಲ, ಈಗ ಜನಸಂಖ್ಯೆ ಬಗ್ಗೆ ಜಾಗೃತಿ ಬಂದಿದೆ ಆದರೆ ಜನರು ೨-೩ ಮೂರು ಮಕ್ಕಳು ಸಾಕು ಎಂದುಕೊಳ್ಳುತ್ತಾರೆ, ಈಗ ಕಾಯ್ದೆಯನ್ನು ಜಾರಿ ಮಾಡಲು ಅಗತ್ಯವೇನಿದೆ, ನಾನು ಬಿ.ಜೆ.ಪಿ ನಾಯಕರು ಹೇಳುತ್ತೇನೆ ಎಂದು ಶಾಸಕ ಜಮೀರ್ ಅಹ್ಮದ್ ಜಿಜೆಪಿ ವಿರುದ್ದ ಕಿಡಿಕಾರಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img