Friday, July 23, 2021
Homeಸುದ್ದಿ ಜಾಲಕಾಲು ಬೆರಳಿಗೆ ಮಾಸ್ಕ್ ಹಾಕಿದ ಉತ್ತರಾಖಂಡ ಸಚಿವ ಯತೀಶ್ವರಾನಂದ್

ಇದೀಗ ಬಂದ ಸುದ್ದಿ

ಕಾಲು ಬೆರಳಿಗೆ ಮಾಸ್ಕ್ ಹಾಕಿದ ಉತ್ತರಾಖಂಡ ಸಚಿವ ಯತೀಶ್ವರಾನಂದ್

ಉತ್ತರಾಖಂಡ : ಉತ್ತರಾಖಂಡದ ಸಚಿವ ಯತೀಶ್ವರಾನಂದ್ ಅವರು ಸಭೆಯೊಂದರಲ್ಲಿದ್ದಾಗ ಅವರ ಕಾಲಿನ ಬೆರಳಿಗೆ ಮಾಸ್ಕ್ ನೇತು ಹಾಕಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸಚಿವರ ಚಿತ್ರಕ್ಕೆ ಸಾರ್ವಜನಿಕರಿಂದ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಉತ್ತರಾಖಂಡದ ಕೃಷಿ ಸಚಿವ ಸುಬೋಧ್ ಯುನಿಯಾಲ್ ಇತರ ರಾಜ್ಯ ಸಚಿವರೊಂದಿಗೆ ಯತೀಶ್ವರಾನಂದ್ ಸಂಭಾಷಣೆ ನಡೆಸುವುದನ್ನು ಚಿತ್ರದಲ್ಲಿ ಕಾಣಬಹುದು. ಚಿತ್ರದಲ್ಲಿ ಯಾರೂ ಸರಿಯಾಗಿ ಮಾಸ್ಕ್ ಧರಿಸಿರುವುದು ಕಂಡುಬಂದಿಲ್ಲವಾದರೂ, ಯತೀಶ್ವರಾನಂದ್ ಕಾಲಿನ ಮೇಲೆ ಕಾಲು ಹಾಕಿ ಕುಳಿತಿರುವಾಗ ಅವರ ಕಾಲ್ಬೆರಳುಗಳಿಗೆ ನೇತಾಡುತ್ತಿರುವ ಮಾಸ್ಕ್ ಕಾಣಬಹುದು.

ಯತೀಶ್ವರಾನಂದ್ ಹರಿದ್ವಾರದ (ಗ್ರಾಮೀಣ) ಶಾಸಕ ಮತ್ತು ಉತ್ತರಾಖಂಡ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಕಬ್ಬು ಮತ್ತು ಗ್ರಾಮೀಣಾಭಿವೃದ್ಧಿಯಂತಹ ಖಾತೆಗಳ ಉಸ್ತುವಾರಿಯನ್ನು ಅವರು ಹೊಂದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img