Thursday, July 29, 2021
Homeಸುದ್ದಿ ಜಾಲಬಂಗಾಳಕೊಲ್ಲಿಯಲ್ಲಿ ಟ್ರಾಲರ್​ ಪಲ್ಟಿ: 9 ಮೀನುಗಾರರ ಶವ ಪತ್ತೆ

ಇದೀಗ ಬಂದ ಸುದ್ದಿ

ಬಂಗಾಳಕೊಲ್ಲಿಯಲ್ಲಿ ಟ್ರಾಲರ್​ ಪಲ್ಟಿ: 9 ಮೀನುಗಾರರ ಶವ ಪತ್ತೆ

ನಮ್ಖಾನಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ 9 ಮೀನುಗಾರರ ಶವಗಳು ಗುರುವಾರ ಬೆಳಿಗ್ಗೆ ಬಂಗಾಳಕೊಲ್ಲಿಯಲ್ಲಿ ಅಪಘಾತಕ್ಕೀಡಾದ ಟ್ರಾಲರ್(ಸಣ್ಣ ಮಟ್ಟದ ಹಡಗು) ಒಳಗೆ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಬ್ಬ ವ್ಯಕ್ತಿ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಬುಧವಾರ ಮುಂಜಾನೆ ಬಖಾಲಿ ಕರಾವಳಿಯ ರಕ್ತೇಶ್ವರಿ ದ್ವೀಪದ ಬಳಿ ಇದ್ದಕ್ಕಿದ್ದಂತೆ ಅಲೆಗಳು ಅಪ್ಪಳಿಸಿದ್ದು ಪರಿಣಾಮ ‘ಹೈಮಾಬತಿ’ ಎಂಬ ಟ್ರಾಲರ್ ಪಲ್ಟಿಯಾಗಿದೆ. ಮೀನುಗಾರರಾದ ಶಂಕರ್ ಸಶ್ಮಲ್ ಮತ್ತು ಸೈಕತ್ ದಾಸ್ ಅವರು ಟ್ರಾಲರ್ ಅನ್ನು ಮುನ್ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಇನ್ನು ಪಶ್ಚಿಮ ಬಂಗಾಳ ಸರ್ಕಾರವು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಒಂದು ದಿನದ ಶೋಧ ಮತ್ತು ಪಾರುಗಾಣಿಕಾ ಪ್ರಯತ್ನಗಳ ನಂತರ ಮೀನುಗಳನ್ನು ತುಂಬಿದ್ದ ಟ್ರಾಲರ್‌ನ ಕ್ಯಾಬಿನ್‌ನಲ್ಲಿ ಒಂಬತ್ತು ಶವಗಳು ಪತ್ತೆಯಾಗಿವೆ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img