Friday, July 30, 2021
Homeಬೆಂಗಳೂರುವಿಧಾನಸೌಧದ ಕಾರಿಡಾರ್​ನಲ್ಲಿ ಮಾಧ್ಯಮಕ್ಕೆ ನಿರ್ಬಂಧ

ಇದೀಗ ಬಂದ ಸುದ್ದಿ

ವಿಧಾನಸೌಧದ ಕಾರಿಡಾರ್​ನಲ್ಲಿ ಮಾಧ್ಯಮಕ್ಕೆ ನಿರ್ಬಂಧ

ಬೆಂಗಳೂರು : ವಿಧಾನಸೌಧದ ಕಾರಿಡಾರ್ ಮತ್ತು ಮೊಗಸಾಲೆಗಳಲ್ಲಿ ಮಾಧ್ಯಮಗಳು ಚಿತ್ರೀಕರಣ ಮಾಡಲು ಮತ್ತು ಫೋಟೋ ತೆಗೆಯಲು ನಿರ್ಬಂಧ ವಿಧಿಸಿ ಸರ್ಕಾರ ವಿವಾದಾತ್ಮಕ ಆದೇಶ ಹೊರಡಿಸಿದೆ. ಆ ಮೂಲಕ ಮಾಧ್ಯಮಗಳನ್ನು ವಿಧಾನಸೌಧದಿಂದ ಹೊರಗಿಡುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ.

ಕೆಂಗಲ್ ಗೇಟ್ ಬಳಿ ಹಾಗೂ ಅಧಿಕೃತ ಸಚಿವರ ಕಚೇರಿ ಹೊರತುಪಡಿಸಿ ವಿಧಾನಸೌಧದ ಕಾರಿಡಾರ್‌ನಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಸರ್ಕಾರ ಆದೇಶಿಸಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಆದೇಶದ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ವಿವಾದಿತ ಆದೇಶ ಹೊರಡಿಸಿದ ಮುಖ್ಯಮಂತ್ರಿ ಬಿಎಸ್​ವೈ, ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ವೇಳೆ ಹೆಚ್ ಡಿ ಕುಮಾರಸ್ವಾಮಿ ಮಾಧ್ಯಮಗಳನ್ನು ವಿಧಾನಸೌಧದ ಮೊದಲ ಮಹಡಿಗೆ ಸೀಮಿತಗೊಳಿಸುವ ಯತ್ನ ನಡೆಸಿದ್ದರು. ನಂತರ ಈ ಪ್ರಯತ್ನಕ್ಕೆ ತೀವ್ರ ವಿರೋಧ ಮತ್ತು ಟೀಕೆ ಎದುರಿಸಿದ್ದರು. ಈಗ ಬಿಜೆಪಿ ಸರ್ಕಾರ ಅಂತಹುದೇ ಆದೇಶ ಮಾಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img