Friday, July 30, 2021
Homeಸುದ್ದಿ ಜಾಲಜರ್ಮನಿಯಲ್ಲಿ ಮಹಾ ಪ್ರವಾಹಕ್ಕೆ 103ಕ್ಕೂ ಹೆಚ್ಚು ಬಲಿ

ಇದೀಗ ಬಂದ ಸುದ್ದಿ

ಜರ್ಮನಿಯಲ್ಲಿ ಮಹಾ ಪ್ರವಾಹಕ್ಕೆ 103ಕ್ಕೂ ಹೆಚ್ಚು ಬಲಿ

ಬರ್ಲಿನ್: ಜರ್ಮನಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 103ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಯುರೋಪಿನಾದ್ಯಂತ ಈವರೆಗೆ ಒಟ್ಟು 118 ಮಂದಿ ಪ್ರಾಣ ಕಳೆದುಕೊಂಡಂತಾಗಿದೆ.

1 ಸಾವಿರಕ್ಕೂ ಅಧಿಕ ಮಂದಿ ಪ್ರವಾಹದಲ್ಲಿ ಕಣ್ಮರೆಯಾಗಿದ್ದಾರೆ. ಜರ್ಮನಿಯ ನಾರ್ತ್ ರೈನ್-ವೆಸ್ಟ್ರಾಲಿಯಾ ರಾಜ್ಯದ ಎರ್ಫ್ಟ್‌ಸ್ಟಾಡ್-ಬ್ಲೆಸೆಮ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಹಲವರು ಸಾವನ್ನಪ್ಪಿದ್ದಾರೆ. ಇದು ಪ್ರವಾಹದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದೆ.

ಲಕ್ಸಂಬರ್ಗ್‌ ಮತ್ತು ನೆದರ್‌ಲ್ಯಾಂಡ್‌ ದೇಶಗಳಲ್ಲೂ ಪ್ರವಾಹದ ತೀವ್ರತೆ ಹೆಚ್ಚಾಗಿದೆ. ಇಲ್ಲಿನ ತಗ್ಗು ಪ್ರದೇಶಗಳಲ್ಲಿದ್ದ ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img