Friday, July 23, 2021
Homeಜಿಲ್ಲೆಬೆಂಗಳೂರುರಾಜ್ಯದಲ್ಲಿ ಕಾಲೇಜುಗಳ ಆರಂಭಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ ಕಾಲೇಜುಗಳ ಆರಂಭಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಪಾಸಿಟಿವಿಟಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರೋ ಕಾರಣ, ಅನ್ ಲಾಕ್ 3.0 ಜಾರಿಗೊಳಿಸಲಾಗಿದೆ. ಇದೀಗ ಮುಂದುವರೆದು, ರಾಜ್ಯ ಸರ್ಕಾರವು ಆರೋಗ್ಯ ಮತ್ತು ಮೆಡಿಕಲ್ ಸೆಕ್ಟರ್ ಗಳಿಗೆ ಸಂಬಂಧಿಸಿದಂತೆ ಮೆಡಿಕಲ್ ಕಾಲೇಜ್ ಗಳನ್ನು ತೆರೆಯಲು ಅನುಮತಿಸಿ ಆದೇಶಿಸಿದೆ.

ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದು, ಕೊರೋನಾ ಸೋಂಕಿನ ಪಾಸಿಟಿವಿಟಿ ದರಗಳ ಇಳಿಕೆಯ ಬಿನ್ನಲೆಯಲ್ಲಿ ಆರೋಗ್ಯ ಮತ್ತು ಮೆಡಿಕಲ್ ಸೆಕ್ಟರ್ ( ಮೆಡಿಕಲ್, ಡೆಂಟಲ್ ಕಾಲೇಜ್, ಆಯುಷ್ ಕಾಲೇಜು ಮತ್ತು ಇನ್ಸಿಟಿಟ್ಯೂಷನ್ನ್, ನರ್ಸಿಂಗ್ ಕಾಲೇಜು ಮತ್ತು ಹೆಲ್ತ್ ಕೇರ್ ಅಕಾಡೆಮಿಕ್ ಇನ್ಟಿಟ್ಯೂಷನ್, ಕಾಲೇಜು ಇತರೆ) ಸಂಸ್ಥೆಗಳು ಕೂಡಲೇ ತೆರೆಯಲು ಈ ಕೆಳಗಿನ ಷರತ್ತುಗಳೊಂದಿಗೆ ಅನುಮತಿಸಿದ್ದಾರೆ.

ಕಾಲೇಜುಗಳಿಗೆ ಆಗಮಿಸುವಂತ ವಿದ್ಯಾರ್ಥಿಗಳು, ಟೀಚಿಂಗ್ ಸ್ಟಾಫ್, ನಾನ್ ಟೀಚಿಂಗ್ ಸ್ಟಾಪ್ ಅಲ್ಲದೇ ಇತರೆ ಸಿಬ್ಬಂದಿಗಳು ಕನಿಷ್ಠ ಪಕ್ಷ ಒಂದು ಡೋಸ್ ಕೊರೋನಾ ಲಸಿಕೆ ಪಡೆದಿರಬೇಕು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img