Sunday, August 1, 2021
Homeಸುದ್ದಿ ಜಾಲದರ್ಶನ್​ ಹಲ್ಲೆ ಪ್ರಕರಣ:ನಾನು ದಲಿತನಲ್ಲ ಎಂದ ಗಂಗಾಧರ್

ಇದೀಗ ಬಂದ ಸುದ್ದಿ

ದರ್ಶನ್​ ಹಲ್ಲೆ ಪ್ರಕರಣ:ನಾನು ದಲಿತನಲ್ಲ ಎಂದ ಗಂಗಾಧರ್

ಬೆಂಗಳೂರು: ನಟ ದರ್ಶನ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದು, ಇದೇ ಹಿನ್ನೆಲೆಯಲ್ಲಿ ದರ್ಶನ್​ ಅವರಿಗೆ ಇದೀಗ ಬಿಗ್​ ರಿಲೀಫ್ ಸಿಕ್ಕಿದೆ.

ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದು, ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ದಲಿತ ವ್ಯಕ್ತಿಗೆ ದರ್ಶನ್ ಹೊಡೆದಿದ್ದಾರೆ ಎಂದಿದ್ದರು. ಈ ಸಂಬಂಧ ರಾಜ್ಯ ಸರ್ಕಾರ ದರ್ಶನ್ ಅಂಡ್​ ಟೀಂ ವಿರುದ್ಧ ತನಿಖೆಗೆ ಆದೇಶ ಮಾಡಿತ್ತು. ಅದರಂತೆ ಮೈಸೂರು ಪೊಲೀಸ್ ಅಧಿಕಾರಿಗಳ ತಂಡ ಗಲಾಟೆ ನಡೆದಿರುವ ಹೋಟೆಲ್​ ಸಂದೇಶ್ ಪ್ರಿನ್ಸ್​ಗೆ ಭೇಟಿ ನೀಡಿತ್ತು.

ದರ್ಶನ್ ಅವರಿಂದ ಹಲ್ಲೆಗೊಳಗಾಗಿದ್ದ ವ್ಯಕ್ತಿ ಎನ್ನಲಾದ ಗಂಗಾಧರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು,​ ನಾನು ದಲಿತ ಅಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ. ಇದರಿಂದ ಇಂದ್ರಜಿತ್ ಲಂಕೇಶ್ ಅವರಿ ಸುಳ್ಳು ಹೇಳಿದ್ರ ಎನ್ನಾಲಾಗುತ್ತಿದೆ.

ಪೊಲೀಸರಿಗೆ ಹೇಳಿಕೆ ನೀಡಿರುವ ಗಂಗಾಧರ್, ನಾನು ಕಳೆದ 20 ವರ್ಷಗಳಿಂದ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. 10 ವರ್ಷದಿಂದ ರೂಂ ಸರ್ವೀಸ್ ಮ್ಯಾನೇಜರ್ ಆಗಿ ಕೆಲಸ‌ ಮಾಡುತ್ತಿದ್ದೇನೆ. ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 10ರವರೆಗೆ ನನ್ನ ಕೆಲಸ. ಹೋಟೆಲ್​ಗೆ ಬರುವ ಗ್ರಾಹಕರನ್ನ ಪಿಆರ್‌ಓ ಪವಿತ್ರ ಅಥವಾ ಶಿವಶಂಕರ್ ಬರಮಾಡಿಕೊಳ್ತಾರೆ. ಕೊಠಡಿ ಪ್ರವೇಶದ ಬಳಿಕ ಅವರಿಗೆ ಅಗತ್ಯವಾದ ಆಹಾರ ಪದಾರ್ಥ ಕಿಚನ್‌ನಲ್ಲಿ ಸಿದ್ಧಪಡಿಸಲಾಗುತ್ತೆ. ಇದನ್ನ ಗ್ರಾಹಕರಿಗೆ ತಲುಪಿಸುವ ಕರ್ತವ್ಯ ನನ್ನದು ಎಂದಿದ್ದಾರೆ.

ಗಂಗಾಧರ್​ ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂದು ಹೇಳಲಾಗಿತ್ತು. ಆದರೆ ಪೊಲೀಸ್ ವಿಚಾರಣೆ ವೇಳೆ ಬೇರೆ ವಿಷಯ ತಿಳಿದುಬಂದಿದೆ. ‘ನಾನು ದಲಿತ ಸಮುದಾಯಕ್ಕೆ ಸೇರಿದವನಲ್ಲ. ನಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು’ ಎಂದು ಗಂಗಾಧರ್​ ಅವರು ವಿಚಾರಣೆ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img