Friday, July 30, 2021
Homeಜಿಲ್ಲೆಬೆಂಗಳೂರುಇದರಲ್ಲಿ ಕುಮಾರಸ್ವಾಮಿ ತರಬೇಡಿ: ಇಂದ್ರಜಿತ್ ಲಂಕೇಶ್

ಇದೀಗ ಬಂದ ಸುದ್ದಿ

ಇದರಲ್ಲಿ ಕುಮಾರಸ್ವಾಮಿ ತರಬೇಡಿ: ಇಂದ್ರಜಿತ್ ಲಂಕೇಶ್

ಬೆಂಗಳೂರು: ನಾನು ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಸಮಾಜದ ಹಿತದೃಷ್ಟಿಯಿಂದ ಮುಂದೆ ಬಂದಿದ್ದೇನೆ. ಬಡವರಿಗೆ, ಸಾಮಾನ್ಯರಿಗೆ ಅನ್ಯಾಯವಾಗಿದೆ. ಸಪ್ಲೇಯರ್ ಗೆ ನ್ಯಾಯ ಕೊಡಿಸಲು ನಾನು ಬಂದಿದ್ದೇನೆ. ಯಾರೋ ಸೆಲೆಬ್ರಿಟಿಗಳ ಪ್ರಕರಣವೆಂದು ನಾನು ಬಂದಿಲ್ಲ. ಹಲ್ಲೆಗೊಳಗಾದವರು, ನೊಂದವರಿಗೆ ನ್ಯಾಯ ದೊರಕಿಸಿಕೊಡಿ ಎಂದು ನಾನು ನೀಡಿದ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಪೊಲೀಸರ ತನಿಖೆಗೆ ಸಹಕಾರ ನೀಡಲು ಎಲ್ಲಾ ರೀತಿಯಲ್ಲೂ ಬದ್ಧವಾಗಿದ್ದೇನೆ. ನಾನು ಪತ್ರಕರ್ತನಾಗಿ ಹಿಂದೆ ಕುಮಾರಸ್ವಾಮಿ ಅವರನ್ನು ಅನೇಕ ಸಲ ಭೇಟಿ ಮಾಡಿದ್ದೇನೆ. ಆದರೆ, ಈ ವಿಷಯಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ಯಾರು ಕುಮ್ಮಕ್ಕು ನೀಡಿಲ್ಲ. ನಾನು ವೈಯಕ್ತಿಕವಾಗಿ ಮುಂದೆ ಬಂದು ಈ ರೀತಿ ನ್ಯಾಯ ಕೇಳಿದ್ದೇನೆ. ನೊಂದವರಿಗೆ ನ್ಯಾಯ ಸಿಗಲಿ, ಒಂದು ಕ್ಷಮೆ ಕೇಳಲಿ ಎಂದು ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img