Friday, July 23, 2021
Homeಜಿಲ್ಲೆಮೈಸೂರುಸರ್ವಿಸ್‌ ತಡವಾಗಿದ್ದಕ್ಕೆ ದರ್ಶನ್‌ ಕೋಪಗೊಂಡಿದ್ದರು:ಗಂಗಾಧರ್

ಇದೀಗ ಬಂದ ಸುದ್ದಿ

ಸರ್ವಿಸ್‌ ತಡವಾಗಿದ್ದಕ್ಕೆ ದರ್ಶನ್‌ ಕೋಪಗೊಂಡಿದ್ದರು:ಗಂಗಾಧರ್

ಮೈಸೂರು: ನನ್ನ ಮೇಲೆ ನಟ ದರ್ಶನ್ ಹಲ್ಲೆ ಮಾಡಿಲ್ಲ. ಸರ್ವಿಸ್​ನಲ್ಲಿ ತಡ ಆಗಿದ್ದಕ್ಕೆ ಬೈದರು ಅಷ್ಟೇ ಎಂದು ಹಲ್ಲೆ ಆರೋಪಕ್ಕೆ ಹೋಟೆಲ್​ ಸಪ್ಲೈಯರ್​ ಗಂಗಾಧರ್ ಹೇಳಿಕೆ ನೀಡಿದರು.

ನಟ ದರ್ಶನ್ ದಿ ಸಂದೇಶ್ ಪ್ರಿನ್ಸ್ ಹೋಟೆಲ್​ನಲ್ಲಿ ಗಂಗಾಧರ್ ಎಂಬ ಸರ್ವಿಸ್ ಮಾಡುವ ವ್ಯಕ್ತಿಯ ಮೇಲೆ ದೃಷ್ಟಿ ಹೋಗುವ ರೀತಿ ಹೊಡೆದಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಇತ್ತೀಚೆಗೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಹೋಟೆಲ್​ಗೆ ಆಗಮಿಸಿದ ಎಸಿಪಿ ಶಶಿಧರ್ ನೇತೃತ್ವದ ತಂಡ ಗಂಗಾಧರ್ ಎಂಬ ವ್ಯಕ್ತಿಯಿಂದ ಮಾಹಿತಿ ಪಡೆದರು.

ಈ ವಿಚಾರವಾಗಿ ಗಂಗಾಧರ್ ಮಾಧ್ಯಮಗಳ ಜೊತೆ ಮಾತನಾಡಿ, ಮೊದಲಾಗಿ ನಾನು ದಲಿತನಲ್ಲ. ಕೇರಳದ ನಾಯರ್ ಜನಾಂಗಕ್ಕೆ ಸೇರಿದವನಾಗಿದ್ದೇನೆ. ಘಟನೆ ನಡೆದ ದಿನ ಸರ್ವಿಸ್​ನಲ್ಲಿ ತಡವಾಗಿದೆ ಎಂದು ದರ್ಶನ್ ಕೋಪಗೊಂಡರು, ಆದರೆ ಯಾರ ಮೇಲೂ ಹಲ್ಲೆ ಮಾಡಿಲ್ಲ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img