Friday, July 23, 2021
Homeಕೋವಿಡ್-19ಭಾರತದಲ್ಲಿ ಆಗಸ್ಟ್ ಅಂತ್ಯಕ್ಕೆ ಕೊರೊನಾ 3ನೇ ಅಲೆ..?

ಇದೀಗ ಬಂದ ಸುದ್ದಿ

ಭಾರತದಲ್ಲಿ ಆಗಸ್ಟ್ ಅಂತ್ಯಕ್ಕೆ ಕೊರೊನಾ 3ನೇ ಅಲೆ..?

ನವದೆಹಲಿ: ಭಾರತದಲ್ಲಿ ಕೊರೊನಾ 2 ನೇ ನಿಯಂತ್ರಣಕ್ಕೆ ಬರುತ್ತಿರುವ ಬೆನ್ನಲ್ಲೇ ಅಗಸ್ಟ್ ಅಂತ್ಯದಲ್ಲಿ ದೇಶಕ್ಕೆ ಕೊರೊನಾ 3 ನೇ ಅಲೆ ಅಪ್ಪಳಿಸಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ಮುಖ್ಯಸ್ಥ ಡಾ. ಸಮಿರನ್ ಪಾಂಡಾ ಹೇಳಿದ್ದಾರೆ.

ಕೊರೊನಾ 3 ನೇ ಕುರಿತಂತೆ ಮಾತನಾಡಿರುವ ಡಾ.ಸಮಿರನ್ ಪಾಂಡಾ, ಮೂರನೇ ಅಲೆಯು ಆಗಸ್ಟ್ ಅಂತ್ಯದಲ್ಲಿ ದೇಶಕ್ಕೆ ಅಪ್ಪಳಿಸಬಹುದು ಮತ್ತು ಎರಡನೇ ಅಲೆಗಿಂತ ಕಡಿಮೆ ತೀವ್ರತೆಯನ್ನು ಹೊಂದಿರುವ ಸಾಧ್ಯತೆಯಿದೆ ಎಂದು ಹೇಳಿದರು.

ರಾಷ್ಟ್ರವ್ಯಾಪಿ ಮೂರನೇ ಅಲೆ ಇರುತ್ತದೆ ಆದರೆ ಅದು ಎರಡನೇ ಅಲೆಯಂತೆ ತೀವ್ರವಾಗಿರುವುದಿಲ್ಲ. ಮೊದಲ ಮತ್ತು ಎರಡನೇ ಅಲೆಗಳಲ್ಲಿ ಪಡೆದ ರೋಗನಿರೋಧಕತೆಯು ಕೆಳಗಿಳಿದರೆ, ಅದು ಮೂರನೇ ಅಲೆಗೆ ಕಾರಣವಾಗಬಹುದು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img