Sunday, August 1, 2021
Homeಜಿಲ್ಲೆಬೆಂಗಳೂರುಪ್ರವಾಸಿ ಪ್ರೀಯರಿಗೆ ಖುಷಿ ಕೊಡುವ ಸಂಗತಿ

ಇದೀಗ ಬಂದ ಸುದ್ದಿ

ಪ್ರವಾಸಿ ಪ್ರೀಯರಿಗೆ ಖುಷಿ ಕೊಡುವ ಸಂಗತಿ

ಬೆಂಗಳೂರು: ಮಹಾನಗರಿ ಬೆಂಗಳೂರು ಸುತ್ತಲಿನ ಜನರ ಪ್ರೀತಿಯ ತಾಣ ನಂದಿ ಬೆಟ್ಟದ ಪ್ರವಾಸ ಶೀಘ್ರದಲ್ಲಿಯೇ ಪ್ರವಾಸಿಗರಿಗೆ ಮತ್ತಷ್ಟು ಖುಷಿಕೊಡಲಿದೆ. ದಶಕಗಳಿಂದ ನೆನಗುದಿಗೆ ಬಿದ್ದಿದ್ದ ಪರಿಕಲ್ಪನೆಯನ್ನು ಜಾರಿಗೆ ತರಲು ರಾಜ್ಯ ಪ್ರವಾಸೋದ್ಯಮ ಇಲಾಖೆ ತೀರ್ಮಾನ ಮಾಡಿದೆ. ಜೊತೆಗೆ ಶ್ರವಣಬೆಳಗೊಳಕ್ಕೆ ಪ್ರವಾಸ ಹೋಗುವವರಿಗೂ ಕೂಡ ರಾಜ್ಯ ಪ್ರವಾಸೋದ್ಯಮ ಇಲಾಖೆ ಖುಷಿ ಸಂಗತಿ ಕೊಟ್ಟಿದೆ. ಈ ಬಗ್ಗೆ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ನೇತೃತ್ವದಲ್ಲಿ ನಡೆದ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಒರಿಸ್ಸಾದ ಕೋನಾರ್ಕ್ ಸೂರ್ಯ ದೇವಾಲಯದ ಮಾದರಿಯಲ್ಲಿ ಶ್ರವಣಬೆಳಗೊಳ ಪ್ರವಾಸಿ ತಾಣವನ್ನೂ ಅಭಿವೃದ್ಧಿಗೊಳಿಸಲು ತೀರ್ಮಾನ ಮಾಡಲಾಗಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೆಂದ್ರ ಪ್ರಧಾನ್ ಅವರು ಒರಿಸ್ಸಾದಲ್ಲಿ ಕೋನಾರ್ಕ್ ಸೂರ್ಯ ದೇವಾಲಯದ ಇತಿಹಾಸ ಹೇಳುವ ಒಂದು ವಿನೂತನ ಪರಿಕಲ್ಪನೆಯನ್ನು ಪ್ರವಾಸಿಗರಿಗೆ ಒದಗಿಸಿದ್ದಾರೆ. ಪ್ರವಾಸಿಗರು ಸೂರ್ಯ ದೇವಾಲಯವನ್ನು ದರ್ಶನ ಮಾಡುವುದಕ್ಕೆ ಮುಂಚೆ ಅಲ್ಲಿ ನಿರ್ಮಾಣ ಮಾಡಿರುವ ಥಿಯೇಟರ್ ನಲ್ಲಿ ಸೂರ್ಯ ದೇವಾಲಯದ ಇತಿಹಾಸವನ್ನು ಚಲನಚಿತ್ರದ ಮೂಲಕ ತೋರಿಸಲಾಗುತ್ತದೆ. ನಂತರ, ಸೂರ್ಯ ದೇವಾಲಯ ದರ್ಶನ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಇಲ್ಲಿಯೂ ಅಭಿವೃದ್ಧಿ ಮಾಡಲು ತೀರ್ಮಾನ ಮಾಡಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img