Friday, July 30, 2021
Homeಜಿಲ್ಲೆಬೆಂಗಳೂರುಸಿಎಂ ದೆಹಲಿ ಪ್ರವಾಸ ಸಹಜ ಭೇಟಿಯಷ್ಟೇ : ಅಶೋಕ್ ಸ್ಪಷ್ಟನೆ

ಇದೀಗ ಬಂದ ಸುದ್ದಿ

ಸಿಎಂ ದೆಹಲಿ ಪ್ರವಾಸ ಸಹಜ ಭೇಟಿಯಷ್ಟೇ : ಅಶೋಕ್ ಸ್ಪಷ್ಟನೆ

ಬೆಂಗಳೂರು: ನೀರಾವರಿ ಸೇರಿದಂತೆ ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಕೇಂದ್ರದ ಜೊತೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿದ್ದು, ರಾಜಕೀಯ ಕಾರಣದ ಭೇಟಿ ಇದಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ನವದೆಹಲಿ ಭೇಟಿ ಕೇವಲ ರೊಟೀನ್ ಭೇಟಿಯಾಗಿದೆ. ರಾಜ್ಯದ ಅಭಿವೃದ್ಧಿ ವಿಚಾರ, ನೀರಾವರಿ ಯೋಜನೆಗಳು ಸೇರಿದಂತೆ ಇತರ ವಿಚಾರಗಳ ಕುರಿತು ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡಲಿದ್ದಾರೆ. ಇದು ಕೇವಲ ಅಭಿವೃದ್ಧಿ ವಿಚಾರಕ್ಕೆ ಮಾತ್ರ ಸೀಮಿತವಾದ ಪ್ರವಾಸವಾಗಿದ್ದು, ಯಾವುದೇ ರಾಜಕೀಯ ಭೇಟಿ ಅಲ್ಲ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img