Friday, July 30, 2021
Homeಜಿಲ್ಲೆಬೆಂಗಳೂರುಮೋದಿ, ಶಾ ಭೇಟಿಗಾಗಿ BSY ಇಂದು ದೆಹಲಿ ಪ್ರಯಾಣ

ಇದೀಗ ಬಂದ ಸುದ್ದಿ

ಮೋದಿ, ಶಾ ಭೇಟಿಗಾಗಿ BSY ಇಂದು ದೆಹಲಿ ಪ್ರಯಾಣ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಇಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಅವರು ಪ್ರಯಾಣ ಕೈಗೊಳ್ಳಲಿದ್ದು, ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತಾ ಶಾ ಸೇರಿ ಅನೇಕ ಪ್ರಮುಖ ಸಚಿವರನ್ನ ಭೇಟಿ ಮಾಡಲಿದ್ದಾರೆ.

ರಾಜ್ಯದ ನೀರಾವರಿ ಯೋಜನೆ, ಅಭಿವೃದ್ಧಿ ಕಾಮಗಾರಿ, ಜಿಎಸ್​ಟಿ ವಿಷಯಗಳ ಕುರಿತು ವಿವಿಧ ಸಚಿವರ ಜೊತೆ ಚರ್ಚೆ ನಡೆಸಲಿದ್ದೇನೆ ಎಂದು ಮುಖ್ಯಮಂತ್ರಿ ಬಿಎಸ್​ವೈ ಈಗಾಗಲೇ ಹೇಳಿದ್ದು, ಸಂಪುಟ ವಿಸ್ತರಣೆ ಹಾಗೂ ಪುನರ್​​ರಚನೆ ವಿಷಯ ನಮ್ಮ ಮುಂದಿಲ್ಲ ಎಂದಿದ್ದಾರೆ. ರಾಜ್ಯದ ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ದೆಹಲಿಗೆ ತೆರಳುತ್ತಿರುವುದಾಗಿ ಬಿಎಸ್​ವೈ ಸ್ಪಷ್ಟಪಡಿಸಿದ್ದಾರೆ. ಪ್ರಧಾನಿಗಳ ಭೇಟಿಗೆ ಬಿಎಸ್​ವೈಗೆ ಇನ್ನೂ ಸಮಯ ನೀಡಿಲ್ಲ, ಅವರು ನೀಡುವ ಸಮಯಕ್ಕೆ ಭೇಟಿಯಾಗಿ ಮಾತುಕತೆ ನಡೆಸಲಿದ್ದು ಶನಿವಾರ ವಾಪಸ್ ಮರಳುತ್ತೇನೆ ಎಂದು ಹೇಳಿದ್ದಾರೆ. ಆದರೆ ಕೆಲವೊಂದು ಮೂಲಗಳ ಪ್ರಕಾರ ಸಚಿವ ಸಂಪುಟ ಪುನರ್​ ರಚನೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img