Thursday, July 29, 2021
Homeಜಿಲ್ಲೆಮೈಸೂರುದರ್ಶನ್‌ ಹಲ್ಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌

ಇದೀಗ ಬಂದ ಸುದ್ದಿ

ದರ್ಶನ್‌ ಹಲ್ಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌

ಮೈಸೂರು : ನಗರದ ಪ್ರಸಿದ್ಧ ಹೋಟೆಲ್ ಗಳಲ್ಲಿ ಒಂದಾದಂತ ಸಂದೇಶ್ ದಿ ಪ್ರಿನ್ ನಲ್ಲಿ ನಟ ದರ್ಶನ್ ಸಿಬ್ಬಂದಿಗಳಿಗೆ ಹೊಡೆದಿದ್ದಾರೆ ಎಂಬುದಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು. ಅಲ್ಲದೇ ಈ ಸಂಬಂಧ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರಿಗೂ ದೂರು ನೀಡಿದ್ದರು. ಇದರಿಂದಾಗಿ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಮೊದಲು ಹಲ್ಲೆಗೊಳಗಾಗಿದ್ದಾರೆ ಎನ್ನಲಾದಂತ ಗಂಗಾಧರ್ ಅವರಿಂದ ಮಾಹಿತಿ ಪಡೆದಿದ್ದಾರೆ.

ಇಂದು ನಟ ದರ್ಶನ್ ನಿಂದ ಹಲ್ಲೆಗೆ ಒಳಗಾಗಿದ್ದಾರೆ ಎನ್ನಲಾದಂತ ಸಂದೇಶ್ ದಿ ಪ್ರಿನ್ಸ್ ನಲ್ಲಿ ಕೆಲಸ ಮಾಡಿ, ಬಿಟ್ಟಿರುವಂತ ಗಂಗಾಧರ್ ಎಂಬುವರಿಂದ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಎನ್ ಆರ್ ಎಸಿಪಿ ಶಶಿಧರ್ ನೇತೃತ್ವದ ತಂಡವು, ಗಂಗಾಧರ್ ಅವರನ್ನು ಈ ಕುರಿತಂತೆ ಹೇಳಿಕೆ ಪಡೆಯಲಾಗಿದ್ದು, ಅವರು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದಂತೆ ದಲಿತನು ಅಲ್ಲ. ನಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು. ನನ್ನ ಮೇಲೆ ಯಾವುದೇ ಹಲ್ಲೆಯಾಗಿಲ್ಲ ಎಂಬುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಗಂಗಾಧರ್ ಅವರು ನೀಡಿದಂತ ಹೇಳಿಕೆಯನ್ನು ದಾಖಲಿಸಿರುವಂತ ಪೊಲೀಸರು, ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನಲ್ಲಿ ನಟ ದರ್ಶನ್ ಅವರಿಂದ ಹಲ್ಲೆ ಮಾಡಿದರ ಕುರಿತಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ದೂರನ್ನು ಆಧರಿಸಿ, ತನಿಖೆಯನ್ನು ನಡೆಸುತ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img