Thursday, July 29, 2021
Homeಜಿಲ್ಲೆಮೈಸೂರುನಟ ದರ್ಶನ್ ಹಲ್ಲೆ ಆರೋಪ: 'ಸಂದೇಶ್ ಪ್ರಿನ್ಸ್' ಗೆ ಪೊಲೀಸರ ಪರಿಶೀಲನೆ

ಇದೀಗ ಬಂದ ಸುದ್ದಿ

ನಟ ದರ್ಶನ್ ಹಲ್ಲೆ ಆರೋಪ: ‘ಸಂದೇಶ್ ಪ್ರಿನ್ಸ್’ ಗೆ ಪೊಲೀಸರ ಪರಿಶೀಲನೆ

ಮೈಸೂರು: ಸ್ಯಾಂಡಲ್ ವುಡ್ ನಟ ದರ್ಶನ್ ಮೈಸೂರಿನ ಸಂದೇಶ ಪ್ರಿನ್ಸ್ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು ಎಂಬ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಕ್ಕೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸಲು ಶುಕ್ರವಾರ ಬೆಳಗ್ಗೆ ಪೊಲೀಸರು ಆಗಮಿಸಿದ್ದಾರೆ.

ಹೊಟೇಲ್ ಗೆ ಬೆಳಗ್ಗೆಯೇ ಬಂದ ಪೊಲೀಸರು ಅಲ್ಲಿನ ಸ್ಥಳಗಳನ್ನು ಪರಿಶೀಲಿಸುತ್ತಿದ್ದಾರೆ. ಅಂದು ದರ್ಶನ್ ಮತ್ತು ಅವರ ಸ್ನೇಹಿತರು ಪಾರ್ಟಿ ನಡೆಸಿದ ಕೋಣೆ, ಅಲ್ಲಿ ಸರ್ವ್ ಮಾಡುತ್ತಿದ್ದ ಸಿಬ್ಬಂದಿಗಳ ಬಗ್ಗೆ, ಸಿಸಿಟಿವಿ ದೃಶ್ಯಾವಳಿಗಳ ಬಗ್ಗೆ ಹೊಟೇಲ್ ಮಾಲೀಕ ಸಂದೇಶ್ ಅವರಿಂದ ಮಾಹಿತಿ ಪಡೆಯುತ್ತಿದ್ದಾರೆ.

ಸದ್ಯ ಈಗ ಹೊಟೇಲ್ ನಲ್ಲಿ ಸಂದೇಶ್ ಇದ್ದಾರೆ. ನಿನ್ನೆ ಸಾಯಂಕಾಲ ಬೆಂಗಳೂರಿನಿಂದ ಆಗಮಿಸಿದ್ದ ನಟ ದರ್ಶನ್ ಹೊಟೇಲ್ ಗೆ ಆಗಮಿಸಿ ಸಂದೇಶ್ ಅವರಲ್ಲಿ ಮಾತುಕತೆ ನಡೆಸಿ ತಮ್ಮ ತೂಗುದೀಪ ಫಾರ್ಮ್ ಹೌಸ್ ಗೆ ತೆರಳಿದ್ದರು. ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ಗಂಗಾಧರ್ ಅವರನ್ನು ಸಹ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸದ್ಯ ಈಗ ನಟ ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲಿಯೇ ಇದ್ದಾರೆ. ಕೋವಿಡ್-19 ನಿರ್ಬಂಧ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಅವರಿಗೆ ಸಹ ಇಂದು ದರ್ಶನ ಸಿಗಲಿಲ್ಲ. ಇಂದು ಮಧ್ಯಾಹ್ನ ನಂತರ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆಯೇ ಎಂಬ ಕುತೂಹಲ ಕೆರಳಿದೆ.

ಗೃಹ ಸಚಿವರಿಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿನ್ನೆ ಮನವಿ ಮಾಡಿದ ಹಿನ್ನೆಲೆ ಗೃಹ ಸಚಿವರು ವಿಷಯ ಬಗ್ಗೆ ತನಿಖೆ ನಡೆಸುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದರು. ಹೀಗಾಗಿ ಹೋಟೆಲ್‌ಗೆ ಅಧಿಕಾರಿಗಳು ಭೇಟಿ ನೀಡಿ, ಸಂದೇಶ್​ ದ್​ ಪ್ರಿನ್ಸ್‌ ಹೋಟೆಲ್ ಮಾಲೀಕ ಸಂದೇಶ್, ಹೋಟೆಲ್ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img