Friday, July 30, 2021
Homeಸುದ್ದಿ ಜಾಲಇಬ್ಬರು ಉಗ್ರರ ಹೊಡೆದುರುಳಿಸಿದ ಭದ್ರತಾ ಪಡೆ

ಇದೀಗ ಬಂದ ಸುದ್ದಿ

ಇಬ್ಬರು ಉಗ್ರರ ಹೊಡೆದುರುಳಿಸಿದ ಭದ್ರತಾ ಪಡೆ

ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ದನ್ಮಾರ್ ಪ್ರದೇಶದ ಅಲಂದಾರ್ ಕಾಲೊನಿಯಲ್ಲಿ ಇಂದು ಮುಂಜಾನೆಯಿಂದಲೇ ಎನ್ ಕೌಂಟರ್ ಆರಂಭವಾಗಿದ್ದು, ಇಬ್ಬರು ಭಯೋತ್ಪಾದಕರ ಹತ್ಯೆಯಾಗಿದೆ.

ಸದ್ಯ ಎನ್ ಕೌಂಟರ್ ಮುಂದುವರಿದಿದ್ದು ಪೊಲೀಸರು ಮತ್ತು ಭದ್ರತಾ ಪಡೆ ಶೋಧ ಕಾರ್ಯದಲ್ಲಿ ಮುಂದುವರೆಸಿದ್ದಾರೆ. ಹೆಚ್ಚಿನ ಮಾಹಿತಿ ಸಿಕ್ಕಿಲ್ಲ ಎಂದು ಜಮ್ಮು-ಕಾಶ್ಮೀರ ವಲಯದ ಪೊಲೀಸರು ತಿಳಿಸಿದ್ದಾರೆ.

ಉಗ್ರರು ಅಡಗಿ ಕುಳಿತಿರುವ ಬಗ್ಗೆ ನಿಖರ ಮಾಹಿತಿ ಪಡೆದ ಭದ್ರತಾ ಪಡೆ ದನ್ಮರ್ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯ ಮುಂದುವರಿಸಿದರು. ಸಫಕದಲ್-ಸೌರ ರಸ್ತೆಯಲ್ಲಿ ಇಂದಿನ ಎನ್ ಕೌಂಟರ್ ನಡೆದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img