Sunday, August 1, 2021
Homeಸುದ್ದಿ ಜಾಲಮುಂಬೈ-ಥಾಣೆ ಹೆದ್ದಾರಿಯಲ್ಲಿ ಉರುಳಿಬಿದ್ದ ಟೊಮ್ಯಾಟೋ ಟ್ರಕ್

ಇದೀಗ ಬಂದ ಸುದ್ದಿ

ಮುಂಬೈ-ಥಾಣೆ ಹೆದ್ದಾರಿಯಲ್ಲಿ ಉರುಳಿಬಿದ್ದ ಟೊಮ್ಯಾಟೋ ಟ್ರಕ್

ಮುಂಬೈ(ಮಹಾರಾಷ್ಟ್ರ): ಟೊಮ್ಯಾಟೋ ಸಾಗಿಸುತ್ತಿದ್ದ ಟ್ರಕ್ ಉರುಳಿ ಈಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಈ ಮೂಲಕ ಮುಂಬೈ ಮತ್ತು ಥಾಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅವ್ಯವಸ್ಥೆ ಏರ್ಪಟ್ಟಿದೆ.

ಟ್ರಕ್​ನಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 20 ಟನ್​ನಷ್ಟು ಟೊಮ್ಯಾಟೋ ರಸ್ತೆಯಲ್ಲಿ ಬಿದ್ದಿದ್ದು, ಜೆಸಿಬಿಗಳನ್ನು ಬಳಸಿ ತೆರವುಗೊಳಿಸಲಾಗುತ್ತಿದೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

ಭಾರಿ ಮಳೆಯ ಕಾರಣದಿಂದ ನಿಯಂತ್ರಣ ತಪ್ಪಿದ ಟ್ರಕ್ ರಸ್ತೆಗೆ ಉರುಳಿ ಅವಘಡ ಸಂಭವಿಸಿದೆ. ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ. ಮಳೆಯ ನಡುವೆಯೇ ಸಿಬ್ಬಂದಿ ಟೊಮ್ಯಾಟೋ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img