Sunday, August 1, 2021
Homeಸುದ್ದಿ ಜಾಲಕೋವಿಡ್‌ ವಿರುದ್ಧ ಹೋರಾಟಕ್ಕೆ 4 'ಟಿ' ತಂತ್ರ : ಮೋದಿ ಸೂಚನೆ

ಇದೀಗ ಬಂದ ಸುದ್ದಿ

ಕೋವಿಡ್‌ ವಿರುದ್ಧ ಹೋರಾಟಕ್ಕೆ 4 ‘ಟಿ’ ತಂತ್ರ : ಮೋದಿ ಸೂಚನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು 6 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವರ್ಚುವಲ್‌ ಸಭೆ ನಡೆಸಿದರು. ಈ ವೇಳೆ ಕೋವಿಡ್‌ ಪ್ರಕರಣಗಳನ್ನು ಕಡಿಮೆ ಮಾಡಲು ಟೆಸ್ಟ್‌-ಟ್ರ್ಯಾಕ್‌-ಟ್ರೀಟ್‌-ಟಿಕಾ ಎಂಬ ನಾಲ್ಕು ‘ಟಿ’ ಮಂತ್ರಗಳನ್ನು ಪ್ರಸ್ತಾಪಿಸಿದ್ದಾರೆ. ಕೆಲವು ರಾಜ್ಯಗಳಲ್ಲಿ ಇನ್ನೂ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವುದು ಗಂಭೀರ ವಿಷಯ ಎಂದು ಮೋದಿ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಒಡಿಶಾ ರಾಜ್ಯಗಳು ಮುಖ್ಯಮಂತ್ರಿಗಳೊಂದಿಗೆ ಅವರು ಸಭೆ ನಡೆಸಿದರು. ಮಹಾಮಾರಿ ವಿರುದ್ಧ ಹೋರಾಡಲು ಬೇಕಿರುವ ಮಾರ್ಗ ಸೂಚಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಮೈಕ್ರೋ ಕಂಟೈನ್ಮೆಂಟ್‌ ಜೋನ್‌ಗಳ ಮೇಲೆ ಹೆಚ್ಚು ಗಮನ ಹರಿಸಬೇಕು ಎಂದು ಇದೇ ವೇಳೆ ಸಲಹೆ ನೀಡಿದ್ದಾರೆ.

ಎಲ್ಲರ ಸಹಕಾರದಿಂದ ಒಗ್ಗಟ್ಟಾಗಿ ಇಡೀ ದೇಶ ಕೋವಿಡ್ ವಿರುದ್ಧ ಹೋರಾಟ ಮಾಡುತ್ತಿದೆ. ಕೊರೊನಾ 3ನೇ ಅಲೆಯ ಭೀತಿ ಶುರುವಾಗಿದೆ. ಕೆಲ ರಾಜ್ಯಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದು ಕಳವಳಕಾರಿ ಎಂದಿದ್ದಾರೆ. ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಇಂದಿಗೂ ಪ್ರಕರಣಗಳು ಹೆಚ್ಚಾಗುತಲ್ಲೇ ಇವೆ. ಕೋವಿಡ್‌ ಪರೀಕ್ಷೆ ಹಾಗೂ ವ್ಯಾಕ್ಸಿನ್‌ ಅಭಿಯಾನವನ್ನು ಹೆಚ್ಚಿಸುವಂತೆ ಈ ರಾಜ್ಯಗಳು ಮುಖ್ಯಮಂತ್ರಿಗಳಿಗೆ ಸೂಚಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img