Friday, July 30, 2021
Homeಸುದ್ದಿ ಜಾಲಕೇರಳದಲ್ಲಿ ಮತ್ತೆ ಐದು ಜನರಲ್ಲಿ ಜಿಕಾ ವೈರಸ್ ಪತ್ತೆ

ಇದೀಗ ಬಂದ ಸುದ್ದಿ

ಕೇರಳದಲ್ಲಿ ಮತ್ತೆ ಐದು ಜನರಲ್ಲಿ ಜಿಕಾ ವೈರಸ್ ಪತ್ತೆ

ಕೇರಳದಲ್ಲಿ ಕೊರೊನಾ ವೈರಸ್ ಬೆನ್ನಲ್ಲೇ ಜಿಕಾ ವೈರಸ್ ಸೋಂಕು ಆತಂಕ ಮೂಡಿಸಿದ್ದು, ಕೇರಳದಲ್ಲಿ ಮತ್ತೆ ಐದು ಜನರಲ್ಲಿ ಪಾಸಿಟಿವ್ ಧೃಡಪಟ್ಟಿದ್ದು ಈ ಮೂಲಕ ಜಿಕಾ ವೈರಸ್ 28 ಕ್ಕೆ ಏರಿಕೆಯಾಗಿದೆ.

ಗುರುತಿಸಲಾದ ಐದು ಹೊಸ ಪ್ರಕರಣಗಳಲ್ಲಿ, ನಾಲ್ಕು ಮಹಿಳೆಯರು. ಅವರಲ್ಲಿ ಇಬ್ಬರು ತಿರುವನಂತಪುರಂನ ಅನಾಯಾರ ಮೂಲದವವರಿಗೆ ಜಿಕಾ ವೈರಸ್ ಸೋಂಕು ದೃಢಪಟ್ಟಿದೆ.

ಅನಾಯಾರಾದ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಜಿಕಾ ವೈರಸ್ ನ ಗುಚ್ಛವನ್ನು ಗುರುತಿಸಲಾಗಿದೆ ಮತ್ತು ಅದು ಇತರ ಸ್ಥಳಗಳಿಗೆ ಹರಡುವುದನ್ನು ತಡೆಯಲು ಈ ಪ್ರದೇಶದಲ್ಲಿ ಸೊಳ್ಳೆಗಳ ನಿರ್ಮೂಲನೆಗೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ನಿನ್ನೆ ತಿಳಿಸಿತ್ತು. ತಿರುವನಂತಪುರದಲ್ಲಿ ಜಿಕಾ ಹರಡುವಿಕೆಯ ಹಿನ್ನೆಲೆಯಲ್ಲಿ ಜಿಲ್ಲಾ ವೈದ್ಯಕೀಯ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img