Friday, July 30, 2021
Homeಜಿಲ್ಲೆಚಾಮರಾಜನಗರವಿದ್ಯುತ್ ಬೇಲಿಗೆ ಸಿಲುಕಿ ಹೆಣ್ಣಾನೆ ಸಾವು

ಇದೀಗ ಬಂದ ಸುದ್ದಿ

ವಿದ್ಯುತ್ ಬೇಲಿಗೆ ಸಿಲುಕಿ ಹೆಣ್ಣಾನೆ ಸಾವು

ಗುಂಡ್ಲುಪೇಟೆ (ಚಾಮರಾಜನಗರ): ರೈತರೊಬ್ಬರು ಬೆಳೆ ರಕ್ಷಣೆಗಾಗಿ ಬಳಸಿದ್ದ ಅಕ್ರಮ ವಿದ್ಯುತ್ ಬೇಲಗೆ ಸಿಲುಕಿ ಹೆಣ್ಣಾನೆಯೊಂದು ಮೃತ ಪಟ್ಟಿರುವ ಘಟನೆ ತಾಲೂಕಿನ ಆಲತ್ತೂರು ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ ಕಾಡಂಚಿನ ಆಲತ್ತೂರು ಗ್ರಾಮದ ಜಗನ್ನಾಥ್ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ನೆಲಗಡಲೆ ರಕ್ಷಣೆಗೆ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಿದ್ದರು. ಬುಧವಾರ ರಾತ್ರಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಆನೆಯು ಜಗನ್ನಾಥ್ ರವರ ಜಮೀನಿಗೆ ನುಗ್ಗಲು ಪ್ರಯತ್ನಿಸಿದಾಗ ವಿದ್ಯುತ್ ಪ್ರವಹದಿಂದ ಸಾವನ್ನಪ್ಪಿದೆ. ಆನೆಗೆ ಸುಮಾರು 40 ವರ್ಷ ವಯಸ್ಸಾಗಿತ್ತು ಎಂದು ಅಂದಾಜಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img