Friday, July 30, 2021
Homeಸುದ್ದಿ ಜಾಲನಾಯಕರ ಸಭೆ ಕರೆದ ಸಭಾಧ್ಯಕ್ಷ ವೆಂಕಯ್ಯನಾಯ್ಡು

ಇದೀಗ ಬಂದ ಸುದ್ದಿ

ನಾಯಕರ ಸಭೆ ಕರೆದ ಸಭಾಧ್ಯಕ್ಷ ವೆಂಕಯ್ಯನಾಯ್ಡು

ನವದೆಹಲಿ: ಇದೇ 19 ರಿಂದ ಸಂಸತ್​​ನ ಮುಂಗಾರು ಅಧಿವೇಶನ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ವೆಂಕಯ್ಯನಾಯ್ಡು, ಜು. 17 ರಂದು ರಾಜ್ಯಸಭೆಯ ಎಲ್ಲ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ.

ಈ ಮಧ್ಯೆ, ಈ ಹಿಂದಿನ ರಾಜ್ಯಸಭೆಯ ಸಭಾ ನಾಯಕರಾಗಿದ್ದ ತಾವರಚಂದ್​ ಗೆಹ್ಲೋಟ್​ ಕರ್ನಾಟಕ ರಾಜ್ಯಪಾಲರಾಗಿರುವ ಕಾರಣ, ಆ ಸ್ಥಾನಕ್ಕೆ ಸಚಿವ ಪಿಯೂಷ್​ ಗೋಯಲ್​ ಅವರನ್ನು ನೇಮಕ ಮಾಡಲಾಗಿದೆ. ಇನ್ನು 18ಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ, ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ. ಜು. 18 ರಂದು ನಡೆಯಲಿರುವ ಸರ್ವಪಕ್ಷಗಳ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ವಹಿಸಿಕೊಳ್ಳುವ ಸಾಧ್ಯತೆ ಇದೆ.

ಮತ್ತೊಂದೆಡೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಕೂಡಾ ಸರ್ವಪಕ್ಷಗಳ ಸಭೆ ಕರೆದಿದ್ದು, ಸುಗಮ ಕಲಾಪದ ಬಗ್ಗೆ ನಾಯಕರೊಂದಿಗೆ ಚರ್ಚಿಸಲಿದ್ದಾರೆ. ಜುಲೈ 19 ರಿಂದ ಆರಂಭವಾಗುವ ಅಧಿವೇಶನ ಆಗಸ್ಟ್​ 13 ರಂದು ಕೊನೆಗೊಳ್ಳಲಿದೆ.

ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್​​ಡಿಎ ಸರ್ಕಾರದ ವೈಫಲ್ಯಗಳನ್ನು ಎತ್ತಿತೋರಿಸಲು ಸನ್ನದ್ಧವಾಗಿವೆ. ಬೆಲೆ ಏರಿಕೆ, ಪೆಟ್ರೋಲ್​ – ಡೀಸೆಲ್​ ಬೆಲೆ ಗಗನ ಮುಖಿ ಆಗಿರುವ ಬಗ್ಗೆ ಸದನದಲ್ಲಿ ಕೋಲಾಹಲ ಉಂಟಾಗುವ ಸಾಧ್ಯತೆಗಳಿವೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img