Thursday, July 29, 2021
Homeಸುದ್ದಿ ಜಾಲದ್ವಿತೀಯು ಪಿಯುಗೆ ಇಂದಿನಿಂದ ಆನ್‌ಲೈನ್ ತರಗತಿ ಶುರು

ಇದೀಗ ಬಂದ ಸುದ್ದಿ

ದ್ವಿತೀಯು ಪಿಯುಗೆ ಇಂದಿನಿಂದ ಆನ್‌ಲೈನ್ ತರಗತಿ ಶುರು

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನ(2021-22) ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜುಲೈ 15ರಿಂದ ಆನ್‌ಲೈನ್ ಮೂಲಕ ತರಗತಿಗಳನ್ನು ಆರಂಭಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಎಲ್ಲಾ ಪಿಯು ಕಾಲೇಜುಗಳಿಗೆ ಆದೇಶಿಸಿದೆ.

ಪ್ರಸಕ್ತ ಸಾಲಿನ ಭೌತಿಕ ತರಗತಿಗಳ ಆರಂಭದ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಜು.15ರಿಂದ ಆನ್‌ಲೈನ್ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಪಾಠ ಮಾಡಬೇಕು.

ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ ತರಗತಿಗಳನ್ನು ನಡೆಸಬೇಕು. ಒಂದು ಗಂಟೆಗೆ ಒಂದು ತರಗತಿಯಂತೆ ನಿತ್ಯ ನಾಲ್ಕು ತರಗತಿಗಳನ್ನು ನಡೆಸಬೇಕು. ಮಧ್ಯಾಹ್ನ 12ರಿಂದ 12.30ರವರೆಗೆ ವಿರಾಮ ನೀಡಬೇಕೆಂದು ಸೂಚಿಸಿದೆ.

ಆದರೆ ಈ ಬಾರಿ ಉಪನ್ಯಾಸಕರು, ತಾವು ಸೇವೆ ನಿರ್ವಹಿಸುತ್ತಿರುವ ಕಾಲೇಜುಗಳಿಂದಲೇ, ಎಮ್ ಎಸ್ ಟೀಮ್, ಗೂಗಲ್ ಮೀಟ್, ಜೂಮ್ ಅಥವಾ ಜಿಯೋ ಮೀಟ್​ಗಳನ್ನು ಉಪಯೋಗಿಸಿಕೊಂಡು ಪಾಠ ಮಾಡಲಿದ್ದಾರೆ. ಇದಕ್ಕೆ ಸಂಬಂದಿಸಿದಂತೆ ಪದವಿ ಪೂರ್ವ ಕಾಲೆಜಿನ ಪ್ರಾಂಶುಪಾಲರು ಸಾಮಾನ್ಯ ವರ್ಷಗಳಂತೆ ಎಲ್ಲಾ ತರಗತಿಗಳಿಗೆ ಅನ್ವಯವಾಗುವಂತೆ ವೇಳಾ ಪಟ್ಟಿಯನ್ನು ತಯಾರಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img