Friday, July 23, 2021
Homeದಕ್ಷಿಣ ಕನ್ನಡಮಂಗಳೂರುಸೂಟ್​​​​ಕೇಸ್​ ಅಡಿಯಲ್ಲಿಟ್ಟು ಚಿನ್ನ ಸಾಗಣೆ

ಇದೀಗ ಬಂದ ಸುದ್ದಿ

ಸೂಟ್​​​​ಕೇಸ್​ ಅಡಿಯಲ್ಲಿಟ್ಟು ಚಿನ್ನ ಸಾಗಣೆ

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಕೇರಳ ರಾಜ್ಯದ ಉಪ್ಪಳದ ಮೊಹಮ್ಮದ್ ಅನ್ಸಾರ್ ಕಯ್ಯಾರ್ (34) ಮತ್ತು ಕೊಝಿಕೋಡ್​ನ ಮೊಹಮ್ಮದ್ ಮೂಸ ಮಿಯಾಸ್ (18) ಬಂಧಿತರು. ಇವರು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ತಪಾಸಣೆ ನಡೆಸಿದಾಗ ಸೂಟ್​​​​ಕೇಸ್​ನ ಕೆಳಭಾಗದಲ್ಲಿ ಚಿನ್ನವನ್ನು ಪೌಡರ್ ರೂಪದಲ್ಲಿ ಅಡಗಿಸಿ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.

ಆರೋಪಿಗಳಿಂದ 703 ಗ್ರಾಂ. ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 34,46,464 ರೂಪಾಯಿ ಎಂದು ಅಂದಾಜಿಸಲಾಗಿದೆ. ಬಂಧಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img