Sunday, August 1, 2021
Homeಜಿಲ್ಲೆಬೆಂಗಳೂರುಸೆಕ್ಯೂರಿಟಿ ಗಾರ್ಡ್ ಗೂ ಥಳಿಸಿದ್ದ 'ಸಾರಥಿ' ಗ್ಯಾಂಗ್; ಇಂದ್ರಜಿತ್ ಸ್ಫೋಟಕ ಮಾಹಿತಿ

ಇದೀಗ ಬಂದ ಸುದ್ದಿ

ಸೆಕ್ಯೂರಿಟಿ ಗಾರ್ಡ್ ಗೂ ಥಳಿಸಿದ್ದ ‘ಸಾರಥಿ’ ಗ್ಯಾಂಗ್; ಇಂದ್ರಜಿತ್ ಸ್ಫೋಟಕ ಮಾಹಿತಿ

ಬೆಂಗಳೂರು: ಹೋಟೆಲ್ ಸಪ್ಲೈಯರ್ ಮೇಲೆ ನಟ ದರ್ಶನ್ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ಸಂದೇಶ್ ಹೋಟೆಲ್ ಸಪ್ಲೈಯರ್ ಹಾಗೂ ಇನ್ನಿಬ್ಬರ ಮೇಲೂ ನಟ ದರ್ಶನ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂದ್ರಜಿತ್ ಲಂಕೇಶ್, ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದೇ ದರ್ಶನ್ ಎಂದು ಹೇಳುವ ಮೂಲಕ ಹಲ್ಲೆ ನಡೆಸಿದ್ದರೆ ಸಾಬೀತುಪಡಿಸಲಿ ಎಂಬ ದರ್ಶನ್ ಹೇಳಿಕೆಗೆ ತಿರುಗೇಟು ನೀಡಿದರು. ಲಾಕ್ ಡೌನ್ ಸಮಯದಲ್ಲಿ ದರ್ಶನ್ ಹಾಗೂ ಗ್ಯಾಂಗ್ ಮೋಜು ಮಸ್ತಿಯಲ್ಲಿ ತೊಡಗಿದೆ. ಜೂನ್ 24 ಹಾಗೂ 25ರಂದು ಮೈಸೂರಿನ ಸಂದೇಶ್ ಹೋಟೆಲ್ ನಲ್ಲಿ ಭರ್ಜರಿ ಪಾರ್ಟಿ ನಡೆಸಿದ್ದಾರೆ. ರಾತ್ರಿ 3ಗಂಟೆ ವೇಳೆ ಗಲಾಟೆ ನಡೆದಿದೆ. ಈ ವೇಳೆ ನಟ ದರ್ಶನ್ ಹೋಟೆಲ್ ಸಪ್ಲೈಯರ್ ಗಂಗಾಧರ್ ಎಂಬ ಕನ್ನಡಿಗನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಆತನ ಕಣ್ಣಿಗೆ ಗಂಭೀರವಾಗಿ ಗಾಯವಾಗಿದೆ ಎಂದು ವಿವರಿಸಿದ್ದಾರೆ.

ಗಲಾಟೆಯಾದ ಮಾರನೆ ದಿನವೇ ಹೋಟೆಲ್ ಸಿಬ್ಬಂದಿಗಳು ಕೆಲಸ ಬಿಡಲು ಸಿದ್ಧರಿದ್ದರು ಆದರೆ ಸಂದೇಶ್ ನಾಗರಾಜ್ ಸೇರಿದಂತೆ ಎಲ್ಲರೂ ಸಿಬ್ಬಂದಿಗಳ ಮನವೊಲಿಕೆ ಮಾಡಿದ್ದಾರೆ. ಭಯದಿಂದ ಗಂಗಾಧರ್ ಕಾಂಪ್ರಮೈಸ್ ಆಗಿರಬಹುದು. ಸೆಲೆಬ್ರಿಟಿಯೆಂದು ಎಲ್ಲರೂ ದರ್ಶನ್ ಪರವಾಗಿ ಮಾತನಾಡುತ್ತಾ, ಬಡವರಿಗೆ, ದುಡಿಯುವ ಕೈಗಳಿಗೆ ಅನ್ಯಾಯ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img