Sunday, August 1, 2021
Homeಜಿಲ್ಲೆಮೈಸೂರುಹಲ್ಲೆ ಕುರಿತಂತೆ ಸಂದೇಶ್ ನಾಗರಾಜ್ ಪುತ್ರ ಹೇಳಿದ್ದೇನು..?

ಇದೀಗ ಬಂದ ಸುದ್ದಿ

ಹಲ್ಲೆ ಕುರಿತಂತೆ ಸಂದೇಶ್ ನಾಗರಾಜ್ ಪುತ್ರ ಹೇಳಿದ್ದೇನು..?

ಮೈಸೂರು : ನಮ್ಮ ಹೋಟೆಲ್ ನಲ್ಲಿ ಕೊರೋನಾ ಸೋಂಕಿನ ಪ್ರಕರಣಕ್ಕೂ ಮುನ್ನವೇ ಸಣ್ಣದಾಗಿ ಘಟನೆ ನಡೆದಿತ್ತು. ನಟ ದರ್ಶನ್ ನಮ್ಮ ಹೋಟೆಲ್ ಸಿಬ್ಬಂದಿಯನ್ನು ಬೈದಿದ್ದು ಅಷ್ಟೇ. ಆಗ ನಮ್ಮ ಸಿಬ್ಬಂದಿಯನ್ನು ಬೈಯಬೇಡ ಎಂಬುದಾಗಿ ದರ್ಶನ್ ಗೆ ಹೇಳಿದೆ. ಜೊತೆಗೆ ನಮ್ಮ ಹೋಟೆಲ್ ಸಿಬ್ಬಂದಿಗೆ ಬೇಜಾರು ಮಾಡಿಕೊಳ್ಳಬೇಡ ಅಂತ ಸಮಾಧಾನ ಮಾಡಿದ್ದೇನೆ. ಅದರ ಹೊರತಾಗಿ ನಮ್ಮ ಹೋಟೆಲ್ ಸಿಬ್ಬಂದಿಯ ಮೇಲೆ ನಟ ದರ್ಶನ್ ಹಲ್ಲೆ ನಡೆಸಿಲ್ಲ ಎಂಬುದಾಗಿ ಸಂದೇಶ್ ನಾಗರಾಜ್ ಅವರ ಪುತ್ರ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪದ ಬಗ್ಗೆ ಮೈಸೂರಿನಲ್ಲಿ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದಂತ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಪುತ್ರ, ರಾತ್ರಿ 12 ಗಂಟೆಗೆ ಸಣ್ಣದಾಗಿ ನಟ ದರ್ಶನ್, ನಮ್ಮ ಸಿಬ್ಬಂದಿಯನ್ನು ಸರ್ವಿಸ್ ವಿಚಾರವಾಗಿ ಬೈದಿದ್ದು ನಿಜ. ಅದರ ಹೊರತಾಗಿ ಹಲ್ಲೆಯನ್ನು ನಟ ದರ್ಶನ್ ಮಾಡಿಲ್ಲ ಎಂಬುದಾಗಿ ತಿಳಿಸಿದರು.

ಇದು ಲಾಕ್ ಡೌನ್ ಗೂ ಮುನ್ನವೇ ಆಗಿರುವಂತ ಘಟನೆಯಾಗಿದೆ. ಅಂದು ನಟ ದರ್ಶನ್ ಬೈದಿದ್ದಕ್ಕೆ, ನಮ್ಮ ಸಿಬ್ಬಂದಿಗೆ ಬೈಯ್ಯಬೇಡ ಎಂಬುದಾಗಿ ಹೇಳಿದೆ. ಜೊತೆಗೆ ನಮ್ಮ ಸಿಬ್ಬಂದಿಯನ್ನು ಬೇಜಾರಾಗಬೇಡ ಎಂಬುದಾಗಿ ತಿಳಿಸಿದೆ. ಅಲ್ಲದೇ ನಟ ದರ್ಶನ್ ಗೆ ನೀನ್ ಯಾವ್ ಯಾವ್ ದೋ ಟೆನ್ಷನ್ ನಲ್ಲಿ ನಮ್ಮ ಸಿಬ್ಬಂದಿಗಳನ್ನ ಬೈಯ್ಯಬೇಡ. ನಮಗೆ ಕೆಲಸಕ್ಕೆ ಸಿಬ್ಬಂದಿಗಳೇ ಸಿಗೋದಿಲ್ಲ. ಎದ್ದು ಒಳಗೆ ಹೋಗು ಎಂದು ನಾನೇ ದರ್ಶನ್ ಅವರನ್ನು ಒಳಗೆ ಕಳಿಸಿ ಹೋಟೆಲ್ ನಿಂದ ಹೊರಟೆ ಎಂಬುದಾಗಿ ಹೇಳಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img