Friday, July 23, 2021
Homeಸುದ್ದಿ ಜಾಲಮಾಸ್ಟರ್‌ಕಾರ್ಡ್‌ ಮೇಲೆ ಆರ್‌ಬಿಐ ನಿರ್ಬಂಧ

ಇದೀಗ ಬಂದ ಸುದ್ದಿ

ಮಾಸ್ಟರ್‌ಕಾರ್ಡ್‌ ಮೇಲೆ ಆರ್‌ಬಿಐ ನಿರ್ಬಂಧ

ಮುಂಬೈ: ಕ್ರೆಡಿಟ್‌ ಕಾರ್ಡ್‌ಗಳಿಗಾಗಿ ವೀಸಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಆರ್‌ಬಿಎಲ್‌ ಬ್ಯಾಂಕ್‌ ತಿಳಿಸಿದೆ.

ತಂತ್ರಜ್ಞಾನ ಸಮೀಕರಣಗೊಂಡ ಬಳಿಕ, ಎಂಟರಿಂದ ಹತ್ತು ವಾರಗಳಲ್ಲಿ ವೀಸಾ ನೆಟ್‌ವರ್ಕ್ ಅಡಿಯಲ್ಲಿ ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲು ಆರ್‌ಬಿಎಲ್‌ ನಿರ್ಧರಿಸಿದೆ.

ದೇಶದಲ್ಲಿ ‘ಮಾಸ್ಟರ್‌ಕಾರ್ಡ್‌’ನ ಕ್ರೆಡಿಟ್‌, ಡೆಬಿಟ್‌ ಹಾಗೂ ಪ್ರೀಪೇಯ್ಡ್‌ ಕಾರ್ಡ್‌ಗಳನ್ನು ಹೊಸ ಗ್ರಾಹಕರಿಗೆ ವಿತರಿಸುವುದನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಬಂಧಿಸಿದೆ. ಇದಾದ ಒಂದು ದಿನದ ಬಳಿಕ ಆರ್‌ಬಿಎಲ್‌ ಮತ್ತು ವೀಸಾ ಕಂಪನಿ ನಡುವಿನ ಒಪ್ಪಂದದ ಕುರಿತ ಮಾಹಿತಿ ಹೊರಬಿದ್ದಿದೆ.

ದತ್ತಾಂಶ ಸಂಗ್ರಹ ನಿಯಮಗಳನ್ನು ಅನುಸರಿಸದ ಕಾರಣದಿಂದ ಮಾಸ್ಟರ್‌ಕಾರ್ಡ್‌ ಏಷ್ಯಾ ಪೆಸಿಫಿಕ್‌ ಮೇಲೆ ಆರ್‌ಬಿಐ ಬುಧವಾರ ನಿರ್ಬಂಧ ವಿಧಿಸಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಮಾಸ್ಟರ್‌ಕಾರ್ಡ್‌ ಗ್ರಾಹಕರಿಗೆ ಈ ಆದೇಶದಿಂದ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಆರ್‌ಬಿಐ ಹೇಳಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img