Friday, July 30, 2021
Homeಸುದ್ದಿ ಜಾಲಇಂದು ಪೆಟ್ರೋಲ್, ಡೀಸೆಲ್ ದರ ಎಲ್ಲೆಲ್ಲಿ, ಎಷ್ಟಿದೆ..?

ಇದೀಗ ಬಂದ ಸುದ್ದಿ

ಇಂದು ಪೆಟ್ರೋಲ್, ಡೀಸೆಲ್ ದರ ಎಲ್ಲೆಲ್ಲಿ, ಎಷ್ಟಿದೆ..?

ನವದೆಹಲಿ : ದೇಶದಲ್ಲಿ ಇಂದು ಮತ್ತೆ ತೈಲ ಬೆಲೆ ಏರಿಕೆಯಾಗಿದೆ.. ದೇಶದ ಎಲ್ಲಾ ಮೆಟ್ರೋ ನಗರಗಳು ಸೇರಿದಂತೆ 18ಕ್ಕೂ ಅಧಿಕ ರಾಜ್ಯಗಳಲ್ಲಿ ಪೆಟ್ರೋಲ್ ದರ ಶತಕ ದಾಟಿದೆ.

ಜುಲೈ 15ರಂದು ಪೆಟ್ರೋಲ್ ಬೆಲೆ ಸರಾಸರಿ 35 ಪೈಸೆ ಪ್ರತಿ ಲೀಟರ್ ಏರಿಕೆಯಾಗಿದ್ದು,, ಡೀಸೆಲ್ ಬೆಲೆ 15 ಪೈಸೆ ಪ್ರತಿ ಲೀಟರ್‌ನಂತೆ ಏರಿಕೆಯಾಗಿದೆ.

ದೆಹಲಿಯಲ್ಲಿ ದರ ಬುಧವಾರದಂದು ಪೆಟ್ರೋಲ್ ಪ್ರತಿ ಲೀಟರ್‌ಗೆ 101.54ರು ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 89.87ರು ಆಗಿದೆ. ಮುಂಬೈನಲ್ಲಿ ಪೆಟ್ರೋಲ್ 107.54ರು ಪ್ರತಿ ಲೀಟರ್, ಡೀಸೆಲ್ 97.45 ರೂ. ಆಗಿದೆ.

ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಪ್ರತಿ ಪೆಟ್ರೋಲ್ ಬೆಲೆ ದೇಶದಲ್ಲೇ ಅತ್ಯಧಿಕ 112.86ರು ನಷ್ಟಿದೆ, ಡೀಸೆಲ್ ಬೆಲೆ 103.12ರು ಆಗಿದೆ. ಅಲ್ಲದೆ ರಾಜಸ್ಥಾನದ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಬೆಲೆ 100 ರು ಗಡಿ ದಾಟಿದೆ.

ಚೆನ್ನೈ: ಪೆಟ್ರೋಲ್ 102.23ರೂ- ಡೀಸೆಲ್ 94.39ರೂ ಮತ್ತು ಬೆಂಗಳೂರು: ಪೆಟ್ರೋಲ್ 104.94ರೂ- ಡೀಸೆಲ್ 95.26ರೂ ದಾಖಲಾಗಿದೆ. ಹೈದರಾಬಾದ್: ಪೆಟ್ರೋಲ್ 105.52ರು- ಡೀಸೆಲ್ 97.96 ರೂ ಮತ್ತು ತಿರುವನಂತಪುರಂ: ಪೆಟ್ರೋಲ್ 103.77 ರೂ- ಡೀಸೆಲ್ 96.70 ರೂ ದಾಖಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img