Friday, July 30, 2021
Homeಜಿಲ್ಲೆಬೆಂಗಳೂರುವಿದ್ಯಾರ್ಥಿ ವೇತನಕ್ಕೆ ಹೊಸ ಪೋರ್ಟಲ್

ಇದೀಗ ಬಂದ ಸುದ್ದಿ

ವಿದ್ಯಾರ್ಥಿ ವೇತನಕ್ಕೆ ಹೊಸ ಪೋರ್ಟಲ್

ಬೆಂಗಳೂರು: ರಾಜ್ಯದ ಒಂದನೇ ತರಗತಿಯಿಂದ ಪದವಿವರೆಗಿನ ವಿದ್ಯಾರ್ಥಿಗಳಿಗೆ ಕಾಗದರಹಿತ ಏಕೀಕೃತ ಡಿಜಿಟಲ್ ವ್ಯವಸ್ಥೆ ಮೂಲಕ ವಿದ್ಯಾರ್ಥಿ ವೇತನ ಪಾವತಿ ಮಾಡುವ ವ್ಯವಸ್ಥೆಯನ್ನು ಒಳಗೊಂಡ ಪೋರ್ಟಲ್ ಅನ್ನು ಇಡೀ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ತರಲಾಗಿದೆ.

ಈ ಕುರಿತು ಬಹುಮಹಡಿ ಕಟ್ಟಡದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಆಡಳಿತ ಮತ್ತು ಸಿಬ್ಬಂದಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಇನ್ಮುಂದೆ ಭೌತಿಕವಾಗಿ ಯಾವುದೇ ಅರ್ಜಿ ಸಲ್ಲಿಕೆ ಹಾಗು ದಾಖಲಾತಿ ಸಲ್ಲಿಸಬೇಕಾದ ಅಗತ್ಯವಿಲ್ಲ. ವಿದ್ಯಾರ್ಥಿ ವೇತನ ಪೋರ್ಟಲ್‌ಗೆ ಕೇವಲ ಅವರ ಆಧಾರ್ ನಂಬರ್, ಕಂದಾಯ ಇಲಾಖೆ ಜಾತಿ ಮತ್ತು ಆದಾಯ ದೃಢೀಕರಣಕ್ಕೆ ನೀಡುವ ಆರ್ ಡಿ ಸಂಖ್ಯೆ, ವಿದ್ಯಾರ್ಥಿ ಸಂಖ್ಯೆ ಕೊಟ್ಟರೆ ಸಾಕು, ನಾವೇ ಎಲ್ಲ ಪರಿಶೀಲನೆ ಮಾಡಿಕೊಳ್ಳಲಿದ್ದೇವೆ ಎಂದರು.

ಮೆಟ್ರಿಕ್ ಪೂರ್ವದ ವಿದ್ಯಾರ್ಥಿಗಳು ವಿದ್ಯಾರ್ಥಿ ಸಂಖ್ಯೆ ನೀಡುವ ಅಗತ್ಯವಿಲ್ಲ. ಆದರೆ, ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ವಿದ್ಯಾರ್ಥಿ ಸಂಖ್ಯೆ ನೀಡಬೇಕಿದೆ. ಪ್ರಥಮ ಪಿಯು ವಿದ್ಯಾರ್ಥಿಗಳು ಎಸ್ಎಸ್ಎಲ್​ಸಿ ನೋಂದಣಿ ಸಂಖ್ಯೆ, ದ್ವಿತೀಯು ಪಿಯು ವಿದ್ಯಾರ್ಥಿ ಪ್ರಥಮ ಪಿಯು ನೋಂದಣಿ ಸಂಖ್ಯೆ, ಪದವಿ ವಿದ್ಯಾರ್ಥಿಗಳು ದ್ವಿತೀಯ ಪಿಯು ನೋಂದಣಿ ಸಂಖ್ಯೆ ಹೀಗೆ ಹಿಂದಿನ ವರ್ಗದ ನೋಂದಣಿ ಸಂಖ್ಯೆಯನ್ನು ಆಧಾರ್,ಆರ್.ಡಿ ಸಂಖ್ಯೆ ಜೊತೆಗೆ ನೀಡಬೇಕು. ನಾವೇ ಎಲ್ಲ ಪರಿಶೀಲನೆ ಮಾಡಿಕೊಳ್ಳುತ್ತೇವೆ. ಬ್ಯಾಂಕ್ ಖಾತೆ ಸಂಖ್ಯೆ ನಮಗೆ ಕೊಡುವ ಅಗತ್ಯವಿಲ್ಲ. ಆಧಾರ್ ಸಂಖ್ಯೆಯ ಆಧಾರದಲ್ಲಿ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img