Friday, July 23, 2021
Homeಸುದ್ದಿ ಜಾಲಸೆಪ್ಟೆಂಬರ್‌ನಲ್ಲಿ ಲೇಸರ್ ಶೋ ವೀಕ್ಷಣೆ ಭಾಗ್ಯ

ಇದೀಗ ಬಂದ ಸುದ್ದಿ

ಸೆಪ್ಟೆಂಬರ್‌ನಲ್ಲಿ ಲೇಸರ್ ಶೋ ವೀಕ್ಷಣೆ ಭಾಗ್ಯ

ದಾವಣಗೆರೆ: ಸೆಪ್ಟೆಂಬರ್ ಇಲ್ಲವೇ ಅಕ್ಟೋಬರ್ ವೇಳೆಗೆ ಬೆಣ್ಣೆದೋಸೆ ನಗರಿಯ ಜನರಿಗೆ ಸಂಗೀತ ಕೇಳುತ್ತ ಲೇಸರ್ ಶೋ ವೀಕ್ಷಿಸುವ ಅವಕಾಶ ಲಭ್ಯವಾಗಲಿದೆ. ಸ್ಮಾರ್ಟ್‌ ಸಿಟಿಯಿಂದ ₹ 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಲೇಸರ್ ಶೋ ಕಾಮಗಾರಿಗೆ ಬುಧವಾರ ಚಾಲನೆ ಸಿಕ್ಕಿದ್ದು, ಈಗಾಗಲೇ ಶೇ 50ರಷ್ಟು ಕಾಮಗಾರಿಗಳು ಮುಗಿದಿವೆ. ಬೋನ್ಸಾಯ್ ಗಿಡಗಳ ಕೆಳಗಿನ ಬೆಂಚುಗಳ ಮೇಲೆ ಕುಳಿತು ಸಂಗೀತ ಆಲಿಸುತ್ತ ಲೇಸರ್ ಶೋ ವೀಕ್ಷಿಸಬಹುದು.

‘ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಮಾದರಿ ಇಲ್ಲವೇ ಅದಕ್ಕಿಂತಲೂ ಚೆನ್ನಾಗಿ ಗಾಜಿನ ಮನೆಯಲ್ಲಿ ಲೇಸರ್ ಶೋ ಅನ್ನು ವೀಕ್ಷಿಸಬಹುದಾಗಿದ್ದು, ಮುಂದಿನ ದಸರಾ ಹಬ್ಬದ ವೇಳೆಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ಸಾಧ್ಯತೆ ಇದೆ. ಆ ವೇಳೆಗೆ ಬಣ್ಣದ ಬೆಳಕಿನಲ್ಲಿ ಜನರು ಕಾರಂಜಿಯನ್ನು ವೀಕ್ಷಿಸಬಹುದು’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೋಮ್ಮನ್ನಾರ್‌, ‘ಪ್ರಜಾವಾಣಿ’ಗೆ ತಿಳಿಸಿದರು.

ಕೋವಿಡ್ ಎರಡನೇ ಅಲೆಯಿಂದಾಗಿ ಮುಚ್ಚಿದ್ದ ಗಾಜಿನ ಮನೆ ಈಗ ಪ್ರವಾಸಿಗರಿಗೆ ಮುಕ್ತವಾಗಿದೆ. ಸಿನಿಮಾ, ಧಾರಾವಾಹಿ, ಪ್ರೀವೆಡ್ಡಿಂಗ್‌ ಶೂಟಿಂಗ್ ಹಾಗೂ ಫೋಟೊ ತೆಗೆಯಲು ಅವಕಾಶ ಕಲ್ಪಿಸಲಾಗಿದೆ.

‘ಗಾಜಿನ ಮನೆಯಲ್ಲಿ ‘ನೋಟಗಾರ’ ಚಿತ್ರೀಕರಣಗೊಂಡ ಮೊದಲ ಸಿನಿಮಾ ಆಗಿದ್ದು, ಆ ಬಳಿಕ ಕೊರೊನಾ ಕಾರಣಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಲಾಕ್‌ಡೌನ್ ತೆರವಾದ ಬಳಿಕ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ’ ಎಂದು ಬೋಮ್ಮನ್ನಾರ್‌ ಹೇಳುತ್ತಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img