Thursday, July 29, 2021
Homeಜಿಲ್ಲೆಬೆಂಗಳೂರುಲಸಿಕೆ ಕೊರತೆಗೆ ಸರ್ಕಾರವೇ ಕಾರಣ : ಕಾಂಗ್ರೆಸ್

ಇದೀಗ ಬಂದ ಸುದ್ದಿ

ಲಸಿಕೆ ಕೊರತೆಗೆ ಸರ್ಕಾರವೇ ಕಾರಣ : ಕಾಂಗ್ರೆಸ್

ಬೆಂಗಳೂರು: ರಾಜ್ಯದಲ್ಲಿ ಕೋವಿಡ್​ ಲಸಿಕೆ ಕೊರತೆ ಇಲ್ಲವೆಂದು ಬಿಜೆಪಿ ನಾಯಕರು ಹೇಳುತ್ತಿದ್ದರೆ, ಮತ್ತೊಂದಡೆ ಲಸಿಕೆಗಳ ಕೊರತೆ ಉಂಟಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್​ ಆರೋಪಿಸುತ್ತಿದೆ. ಸಮರ್ಪಕವಾಗಿ ಕಾರ್ಯನಿರ್ವಹಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ವ್ಯಾಕ್ಸಿನ್​ ಕೊರತೆಗೆ ಹೊಣೆ ಎಂದು ಕಾಂಗ್ರೆಸ್ ದೂರಿದೆ.

ಈ ಬಗ್ಗೆ ಟ್ವೀಟ್ ಮಾಡಿ ತನ್ನ ಬೇಸರ ವ್ಯಕ್ತಪಡಿಸಿರುವ ಕಾಂಗ್ರೆಸ್, ಲಸಿಕೆ ಹಿನ್ನೆಡೆಗೆ ರಾಜ್ಯಗಳೇ ಹೊಣೆ ಎಂದು ಕೇಂದ್ರ ಆರೋಪಿಸಿದೆ. ಇದನ್ನು ರಾಜ್ಯ ಬಿಜೆಪಿ ಸರ್ಕಾರ ಒಪ್ಪುವುದೇ? 7,8 ತಿಂಗಳು ಕಳೆದರೂ ಲಸಿಕೆ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳದ ಕೇಂದ್ರದ ಈ ಆರೋಪವು ಎಲ್‌ಕೆಜಿ ಮಕ್ಕಳು ಸಬೂಬು ಹೇಳಿದಂತೆ! ಒಟ್ಟಿನಲ್ಲಿ ಡಬಲ್ ಇಂಜಿನ್‌ಗಳೆರೆಡೂ ಕೆಟ್ಟು ನಿಂತಿವೆ! ಎಂದು ಲೇವಡಿ ಮಾಡಿದೆ.

ಆರಂಭದ ಲಸಿಕಾಕರಣಕ್ಕೆ ಹಿನ್ನೆಡೆಯಾಗುವುದು ಸಹಜ, ಆದರೆ ಲಸಿಕಾಕರಣ ಆರಂಭವಾಗಿ 7,8 ತಿಂಗಳು ಕಳೆದರೂ ಪರಿಸ್ಥಿತಿ ಸುಧಾರಿಸದೆ ತೀವ್ರ ಕೊರತೆಯಾಗುತ್ತಿದೆ ಎಂದರೆ ಅದು ಸರ್ಕಾರದ ವೈಫಲ್ಯ ಹಾಗೂ ಲಸಿಕೆಗಳ ಖಾಸಗಿ ವ್ಯಾಪಾರಕ್ಕೆ ಸಹಕರಿಸಲು ಸರ್ಕಾರದ ಹುನ್ನಾರವೆಂಬುದು ಸ್ಪಷ್ಟ. ಎಷ್ಟಾದರೂ ಇದು ವ್ಯಾಪಾರಿಗಳ ಸರ್ಕಾರವಲ್ಲವೇ!? ಎಂದು ಪ್ರಶ್ನಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img