Thursday, July 29, 2021
Homeಜಿಲ್ಲೆಬೆಳಗಾವಿಗೋಕಾಕ್, ಧೂಪದಾಳ ಫಾಲ್ಸ್ ಗಳಿಗೆ ವೀಕೆಂಡ್ನಲ್ಲಿ ಪ್ರವೇಶವಿಲ್ಲ

ಇದೀಗ ಬಂದ ಸುದ್ದಿ

ಗೋಕಾಕ್, ಧೂಪದಾಳ ಫಾಲ್ಸ್ ಗಳಿಗೆ ವೀಕೆಂಡ್ನಲ್ಲಿ ಪ್ರವೇಶವಿಲ್ಲ

ಬೆಳಗಾವಿ: ಕೋವಿಡ್-19 ಸೋಂಕು ನಿಯಂತ್ರಣ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಶನಿವಾರ, ಭಾನುವಾರ ಹಾಗೂ ರಜಾ‌ ದಿನಗಳಂದು ಗೋಕಾಕ, ಧೂಪದಾಳ ಹಾಗೂ ಗೊಡಚಿನಮಲ್ಕಿ ಫಾಲ್ಸ್ ಗಳ ಸಾರ್ವಜನಿಕ ವೀಕ್ಷಣೆಗೆ ನಿರ್ಭಂಧ ವಿಧಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.

ಪ್ರವಾಸಿ ಸ್ಥಳಗಳಲ್ಲಿ ಕೋವಿಡ್-19 ಮಾರ್ಗಸೂಚಿಗಳ ಪಾಲನೆಯಾಗುತ್ತಿಲ್ಲ. ಜನರು ಮಾಸ್ಕ ಧರಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಕಾರಣ ಸೋಂಕು ನಿಯಂತ್ರಿಸಲು ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮುಂದಿನ ಆದೇಶದವರೆಗೆ ಗೋಕಾಕ್ ಜಲಪಾತ, ಗೊಡಚಿನಮಲ್ಕಿ ಜಲಪಾತ ಮತ್ತು ದೂಪದಾಳ ಪ್ರವಾಸಿ ಸ್ಥಳಕ್ಕೆ ಪ್ರವೇಶ ನಿರ್ಭಂದಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img