Friday, July 23, 2021
Homeಜಿಲ್ಲೆಬೆಳಗಾವಿಕಾಲು ಜಾರಿ ಬಾವಿಗೆ ಬಿದ್ದ ಐದು ವರ್ಷದ ಬಾಲಕ ಸಾವು!

ಇದೀಗ ಬಂದ ಸುದ್ದಿ

ಕಾಲು ಜಾರಿ ಬಾವಿಗೆ ಬಿದ್ದ ಐದು ವರ್ಷದ ಬಾಲಕ ಸಾವು!

ಅಥಣಿ: ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಮಳೆಯಾಗುತ್ತಿದ್ದು, ಕಾಲು ಜಾರಿ ಬಾವಿಗೆ ಬಿದ್ದು ಬಾಲಕ ಮೃತಪಟ್ಟಿದ್ದಾನೆ. ರಡ್ಡೇರಟ್ಟಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತನನ್ನು ಆಕಾಶ್ ಯಲ್ಲಪ್ಪ ಹುಲಸದಾರ (5) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬಾವಿಯಿಂದ ಶವ ಹೊರತೆಗೆದಿದ್ದಾರೆ. ಅಥಣಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಅಜ್ಜ ಪಕ್ಕದ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬಾಲಕ ಹಿಂಬಾಲಿಸಿದ್ದಾನೆ. ಮಣ್ಣು ದಾರಿಯಾಗಿದ್ದರಿಂದ ಕಾಲು ಜಾರಿ ಬಾವಿಯೊಳಗೆ ಬಿದ್ದಿದ್ದಾನೆ. ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದರೂ ಬಾಲಕ ಪತ್ತೆಯಾಗಿಲ್ಲ. ಬಳಿಕ ಬಾವಿಯಲ್ಲಿ ಪರಿಶೀಲಿಸಿದಾಗ ಬಾಲಕ ಬಿದ್ದಿರುವುದು ತಿಳಿದಿದೆ. ಕುಟುಂಬಸ್ಥರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ತಿಳಿಸಿದ್ದು, ಸಿಬ್ಬಂದಿ ಮೃತದೇಹ ಹೊರತೆಗೆದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img