Sunday, August 1, 2021
Homeಸುದ್ದಿ ಜಾಲಟೀಂ​ ಇಂಡಿಯಾ ಆಟಗಾರನಿಗೆ ಕೊರೊನಾ ಪಾಸಿಟಿವ್​ ದೃಢ

ಇದೀಗ ಬಂದ ಸುದ್ದಿ

ಟೀಂ​ ಇಂಡಿಯಾ ಆಟಗಾರನಿಗೆ ಕೊರೊನಾ ಪಾಸಿಟಿವ್​ ದೃಢ

ಲಂಡನ್​: ಇಂಗ್ಲೆಂಡ್​ ಪ್ರವಾಸದಲ್ಲಿರುವ ಟೀಮ್​ ಇಂಡಿಯಾದ ಆಟಗಾರನೊಬ್ಬನಿಗೆ ಕೋವಿಡ್​ ಪಾಸಿಟಿವ್​ ದೃಢಪಟ್ಟಿದ್ದು, ಆತಂಕ ಎದುರಾಗಿದೆ. ಕರೊನಾ ಸೋಂಕು ತಗುಲಿರುವ ಆಟಗಾರ ಕೌಂಟಿ ಚಾಂಪಿಯನ್ XI ಟೀಮ್​​ ವಿರುದ್ಧದ ಜುಲೈ 20ರಿಂದ ನಡೆಯಲಿರುವ ಮೂರು ದಿನಗಳ ಅಭ್ಯಾಸ ಪಂದ್ಯದಿಂದ ಅಲಭ್ಯರಾಗಿದ್ದು, ಅವರ ದುರ್ಹಾಮ್​ ಪ್ರವಾಸವನ್ನು ರದ್ದು ಮಾಡಲಾಗಿದೆ.

ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್​ ಸೋಲಿನ ನಂತರ ಭಾರತೀಯ ಕ್ರಿಕೆಟಿಗರು ಮೂರು ವಾರಗಳ ವಿರಾಮದಲ್ಲಿದ್ದರು. ಇತ್ತ ಡೆಲ್ಟಾ ಕರೊನಾ ರೂಪಾಂತರಿ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜೇಯ್ ಷಾ ಅವರು ಕ್ರಿಕೆಟಿಗರು ಎಚ್ಚರಿಕೆ ನೀಡಿದ್ದರು. ಆದಾಗ್ಯೂ ಆಟಗಾರರು ವಿಂಬಲ್ಡನ್​ ಮತ್ತು ಯೂರೋ ಪಂದ್ಯಗಳನ್ನು ವೀಕ್ಷಿಸಿದ್ದರು. ಈ ವೇಳೆ ಜೇಯ್ ಷಾ ಅವರು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದರು.

ಕಳೆದ ವಾರದ ಪಾಕಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಾಲ್ವರು ಸಿಬ್ಬಂದಿ ಮತ್ತು ಮೂವರು ಆಟಗಾರರು ಸೇರಿದಂತೆ 7 ಮಂದಿಗೆ ಕೋವಿಡ್​ ಪಾಸಿಟಿವ್​ ಆಗಿರುವುದನ್ನು ಇಂಗ್ಲೆಂಡ್​ ವೇಲ್ಸ್​ ಕ್ರಿಕೆಟ್​ ಬೋರ್ಡ್​ (ಇಸಿಬಿ) ತಿಳಿಸಿತ್ತು. ಈ ಬೆಳವಣಿಗೆಯಿಂದಾಗಿ ಇಂಗ್ಲೆಂಡ್ ಏಕದಿನ ತಂಡವನ್ನು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಿ, ಬೆನ್ ಸ್ಟೋಕ್ಸ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಯಿತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img