Friday, July 30, 2021
Homeಸುದ್ದಿ ಜಾಲಕೆ.ಆರ್‌.ಮಾರ್ಕೆಟ್ ಆರಂಭಕ್ಕೆ ಬಿಬಿಎಂಪಿ ಒಪ್ಪಿಗೆ

ಇದೀಗ ಬಂದ ಸುದ್ದಿ

ಕೆ.ಆರ್‌.ಮಾರ್ಕೆಟ್ ಆರಂಭಕ್ಕೆ ಬಿಬಿಎಂಪಿ ಒಪ್ಪಿಗೆ

ಮಾರಕ ಕೊರೋನಾ ಎರಡನೇ ಅಲೆ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಿನಿಂದ ಸಾಕಷ್ಟು ಹಾನಿ ಮಾಡಿದೆ. ಕೊರೋನಾ ಸೋಂಕಿಗೆ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಸೋಂಕು ನಿಯಂತ್ರಣ ಅನಿವಾರ್ಯವಾಗಿದ್ದ ಕಾರಣ ರಾಜ್ಯ ಸರ್ಕಾರ ರಾಜ್ಯಾದ್ಯಂತ 6 ವಾರಗಳ ಲಾಕ್​ಡೌನ್ ಘೋಷಣೆ ಮಾಡಿತ್ತು. ಪರಿಣಾಮ ಬೆಂಗಳೂರಿನ ಜನನಿಬಿಡ ಪ್ರದೇಶವಾಗಿದ್ದ ಕೆ.ಆರ್​. ಮಾರ್ಕೆಟ್​, ಕಲಾಸಿಪಾಳ್ಯ ಮಾರ್ಕೆಟ್​ ಸಹ ಮುಚ್ಚಲಾಗಿತ್ತು.

ಇದರಿಂದ ಸಾವಿರಾರು ವ್ಯಾಪಾರಿಗಳು ಸಂಕಷ್ಟಕ್ಕೆ ಒಳಗಾಗಿದ್ದರು. ಆದರೆ, ಕೊರೋನಾ ಹಾವಳಿ ಕಡಿಮೆಯಾಗಿ ರಾಜ್ಯ ಸರ್ಕಾರ ಈವರೆಗೆ 3 ಹಂತಗಳಲ್ಲಿ ರಾಜ್ಯವನ್ನು ಅನ್​ಲಾಕ್ ಮಾಡಿದ್ದರೂ ಸಹ ಕೆ.ಆರ್. ಮಾರುಕಟ್ಟೆ ತೆಗೆಯಲು ಅನುಮತಿ ನೀಡಿರಲಿಲ್ಲ. ಆದರೆ, ಬಿಬಿಎಂಪಿ ಇಂದು ಕೊನೆಗೂ ಅನುಮತಿ ನೀಡಿರುವುದು, ವ್ಯಾಪಾರಿಗಳ ಸಂತಸಕ್ಕೆ ಕಾರಣವಾಗಿದೆ.​ 

ಕೊರೋನಾ ವೈರಸ್​ ಪ್ರಸ್ತುತ ನಿಯಂತ್ರಣದಲ್ಲಿದೆ. ಹೀಗಾಗಿ ವ್ಯಾಪಾರಸ್ಥರ ಒತ್ತಾಯದ ಮೇರೆಗೆ ಬಿಬಿಎಂಪಿ ಇಂದು ಕಲಾಸಿಪಾಳ್ಯ ಮತ್ತು ಕೆ.ಆರ್. ಮಾರುಕಟ್ಟೆಯನ್ನು ಪುನಃ ತೆಗೆಯಲು ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಿದೆ. ಆದರೆ, ಕೊರೋನಾ ಮಾರ್ಗಸೂಚಿಯನ್ನು ತಪ್ಪದೆ ಪಾಲನೆ ಮಾಡಬೇಕು ಎಂದು ಗ್ರಾಹಕರು ಮತ್ತು ವ್ಯಾಪಾರಸ್ಥರಿಗೆ ಸೂಚನೆ ನೀಡಲಾಗಿದೆ.

ವ್ಯಾಪಾರಿಗಳು ಮತ್ತು ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು, ಅಂಗಡಿ ಎದುರು ಸಾಮಾಜಿಕ ಅಂತರ ಕಾಪಾಡಲು ಬಾಕ್ಸ್ ಮಾಡಬೇಕು, ವ್ಯಾಪಾರಿಗಳು ಹಾಗೂ ಜನರು ಕೋವಿಡ್ ಟೆಸ್ಟ್ ಹಾಗೂ ವ್ಯಾಕ್ಸಿನ್ ಪಡೆದುಕೊಳ್ಳಬೇಕು, ವ್ಯಾಪಾರಿಗಳು ಹಾಗೂ ಗ್ರಾಹಕರು ಸಾಮಾಜಿಕ ಅಂತರ ಕಾಪಾಡಬೇಕು, ಅಂಗಡಿಯಲ್ಲಿ ಶುಚಿತ್ವ ಕಾಪಾಡಬೇಕು, ಗ್ರಾಹಕರಿಗೆ ಸ್ಕ್ರೀನಿಂಗ್ ಟೆಸ್ಟ್ ಕಡ್ಡಾವಾಗಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಅಲ್ಲದೆ, ಕೋವಿಡ್ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲು ಸಹ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img