Friday, July 23, 2021
Homeಸಿನಿಮಾ'ಡ್ಯಾಡಿ ನಂಬರ್ ಒನ್' ಆಗಲಿದ್ದಾರೆ ನಟ ಗಣೇಶ್

ಇದೀಗ ಬಂದ ಸುದ್ದಿ

‘ಡ್ಯಾಡಿ ನಂಬರ್ ಒನ್’ ಆಗಲಿದ್ದಾರೆ ನಟ ಗಣೇಶ್

ಕೊರೊನಾ 2ನೇ ಅಲೆ ಮುಗಿದಿದ್ದು ಎಲ್ಲ ಕಿರುತೆರೆ ವಾಹಿನಿಗಳಲ್ಲಿ ಇದೀಗ ರಿಯಾಲಿಟಿ ಶೋಗಳು ಆರಂಭವಾಗುತ್ತಿವೆ. ಜೀ ಕನ್ನಡ ವಾಹಿನಿಯಲ್ಲಿ 1 ವರ್ಷದ ಹಿಂದೆಯೇ ಆರಂಭವಾಗಬೇಕಿದ್ದ ‘ಡ್ಯಾಡಿ ನಂಬರ್ 1’ ರಿಯಾಲಿಟಿ ಶೋ ಇದೀಗ ಮತ್ತೆ ಸದ್ದು ಮಾಡುತ್ತಿದೆ.

ನಮಸ್ಕಾರ ನಮಸ್ಕಾರ ನಮಸ್ಕಾರ ಎನ್ನುತ್ತಲೇ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಗಮನ ಸೆಳೆಯುವ ಕಾಮಿಡಿ ಟೈಮ್​​ನಿಂದ ಗೋಲ್ಡನ್ ಸ್ಟಾರ್​ ಆಗಿರುವ ನಟ ಗಣೇಶ್, ಡ್ಯಾಡಿ ನಂಬರ್ ಒನ್ ಶೋ ನಿರೂಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಡಿದೆ.

ಇದಕ್ಕೆ ಪೂರಕ ಎಂಬಂತೆ ಹಿಂದೆ 2008ರಲ್ಲಿ ನಟ ಗಣೇಶ್ ಈ ಶೋ ನಡೆಸಿಕೊಟ್ಟಿದ್ದರು. ಒಂದು ತಿಂಗಳ ಹಿಂದೆ ವಾಹಿನಿ ‘ಡ್ಯಾಡಿ ನಂಬರ್ 1’ ಗಾಗಿ ಮಕ್ಕಳಿಂದ ಆಡಿಷನ್ ಕೂಡ ಆರಂಭಿಸಿತ್ತು. ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ಈ ರಿಯಾಲಿಟಿ ಶೋ ನಡೆಸಿಕೊಡಲಿದ್ದಾರೆಯೇ ಎಂಬುದನ್ನು ಗಣೇಶ್ ಅಥವಾ ವಾಹಿನಿಯೇ ಸ್ಪಷ್ಟಪಡಿಸಬೇಕಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img